Advertisement
ಬಹುಮಾನ ವಿತರಿಸಿದ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ., ಸಿಇಒ ವಿನೋದ ಕುಮಾರ್ ಅವರು ಮಾತನಾಡಿ, ಉದಯವಾಣಿ ಬಹಳ ವರ್ಷಗಳಿಂದ ಈ ಸ್ಪರ್ಧೆ ನಡೆಸುತ್ತಿದೆ. ಇದೊಂದು ಸಂಭ್ರಮದ ಕ್ಷಣ. ಹುಟ್ಟಿದ ದಿನ, ಮಾತನಾಡಲು ಶುರು ಮಾಡಿದ ದಿನ, ನಿಂತುಕೊಳ್ಳಲು ಶುರು ಮಾಡಿದ ದಿನ ಹೀಗೆ ಬೇರೆ ಬೇರೆ ದಿನಾಂಕಗಳನ್ನು ದಾಖಲಿಸುತ್ತೇವೆ. “ಉದಯವಾಣಿ’ ಕೂಡ ನಿಮ್ಮ ಮಕ್ಕಳ ಚಿತ್ರವನ್ನು ಪ್ರಕಟಿಸುವ ಮೂಲಕ ದಾಖಲಿಸುತ್ತದೆ. ಭವಿಷ್ಯದಲ್ಲಿ ದೇಶ- ವಿದೇಶ ಮಟ್ಟದ ಪತ್ರಿಕೆಗಳಲ್ಲಿ ನಿಮ್ಮ ಮಗುವಿನ ಚಿತ್ರ ಮುದ್ರಣವಾಗಬಹುದು. ಆಗ ಮೊದಲು ಚಿತ್ರ ಪ್ರಕಟಿಸಿದ್ದು “ಉದಯವಾಣಿ’ ಆಗಿರುವುದನ್ನು ನೀವು ನೆನಪಿಸಿಕೊಳ್ಳುತ್ತೀರಿ. ಒಂದು ವೇಳೆ ಮಕ್ಕಳು ನೆನಪಿಸಿಕೊಳ್ಳದೆ ಇದ್ದರೂ ಪೋಷಕರು ನೆನಪಿಸಿಕೊಡಬೇಕು ಎಂದು ಹೇಳಿದರು. ಎಂಎಂಎನ್‌ಎಲ್ ನ್ಯಾಶನಲ್ ಸೇಲ್ಸ್ ಹೆಡ್ (ಮೆಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ಆನಂದ್ ಎ. ಸ್ವಾಗತಿಸಿ, ಮಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು.
ಚಿಗುರು ಚಿತ್ರ 2018ರ ಬಹುಮಾನಿತ ಮುದ್ದು ಮಕ್ಕಳು ತಮ್ಮ ಹೆತ್ತವರೊಂದಿಗೆ ಸಮಾರಂಭದಲ್ಲಿ ಹಾಜರಿದ್ದು ಇತರ ಮಕ್ಕಳ ಜತೆ ನಲಿದು ಸಂಭ್ರಮಪಟ್ಟರು. ಪ್ರಥಮ ಸ್ಥಾನ ಪಡೆದ ಕಾರ್ಕಳದ ರಿವಾ ಫಾವ್‌ಸ್ತಾ, ದ್ವಿತೀಯ ಸ್ಥಾನಿ ಮೂಡುಬಿದಿರೆಯ ಆತ್ರೇಯ ಕೃಷ್ಣ, ತೃತೀಯ ಸ್ಥಾನ ಗೆದ್ದ ಮೂಲ್ಕಿಯ ಅದ್ವಿತಿ, ಮಣಿಪಾಲದ ಪ್ರದ್ಯುಮ್ನ, ಗುರುಪುರದ ಶೈವಿ, ಉಡುಪಿಯ ವಿಹಾನ್Ï, ಕಿನ್ನಿಗೋಳಿಯ ಕೇನ್ ನಝತ್, ಕಾರ್ಕಳದ ಅದ್ವೆ„ತ್ ಸಹಿತ ಸಮಾಧಾನಕರ ಬಹುಮಾನ ಪಡೆದ ಮಕ್ಕಳು ತಮ್ಮ ಹೆತ್ತವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡು ಸ್ಮರಣೀಯಗೊಳಿಸಿದರು. ಇದರ ಜತೆಗೆ ಉದಯವಾಣಿಯ ಆನ್‌ಲೈನ್ ವಿಭಾಗವೂ ಏರ್ಪಡಿಸಿದ್ದ ಪಬ್ಲಿಕ್ ಚಾಯ್ಸ ಸ್ಪರ್ಧೆಯಲ್ಲಿ ವಿಜೇತರಾದ ಜಾಯ್ ಬ್ರಿಯಲ್ ಪಿರೇರಾ, ಪರೀಶಾ ಕೋಟ್ಯಾನ್ ಮತ್ತು ದೇವರಾಜನ್ ಅವರಿಗೂ ಬಹುಮಾನ ವಿತರಿಸಲಾಯಿತು.
Related Articles
ವಿಜೇತ ಮಕ್ಕಳಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಮಕ್ಕಳು ಇತರ ಮಕ್ಕಳ ಜತೆ ನಾನಾ ರೀತಿಯ ತುಂಟಾಟ ಪ್ರದರ್ಶಿಸುತ್ತ ತಮ್ಮ ಹೆತ್ತವರೊಂದಿಗೆ ಸಂತಸದ ಕ್ಷಣಗಳನ್ನು ಸೃಷ್ಟಿಸಿದರು. ಬಹುಮಾನ ಸ್ವೀಕರಿಸುತ್ತಾ ಫೋಟೋಗೆ ಪೋಸ್ ಕೊಟ್ಟರು.
Advertisement