Advertisement
ನಮಗೆ ಬಸ್ ಬೇಕೇ ಬೇಕು: ಅಭಿಯಾನದ ಭಾಗವಾಗಿ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಪುತ್ತೂರು, ಬಿ.ಸಿ.ರೋಡು, ಧರ್ಮಸ್ಥಳ, ಸುಳ್ಯ ಡಿಪೋಗಳಲ್ಲಿ ಒಟ್ಟು ಹದಿನಾಲ್ಕು ಶೆಡ್ನೂಲ್‌ನ ಅಗತ್ಯತೆಯನ್ನು ಪರಿಗಣಿಸಲಾಗಿದೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
Related Articles
Advertisement
ಪ್ರಸ್ತುತ ವಿದ್ಯಾರ್ಥಿಗಳ ಸಹಿತ ಜನರ ಓಡಾಟ ಹೆಚ್ಚಾಗಿದೆ. ನಗರದ ವ್ಯಾಪ್ತಿಯು ವಿಸ್ತಾರಗೊಂಡಿದೆ. ಹಾಗಾಗಿ ಸಿಟಿ ಬಸ್ ಓಡಾಟಕ್ಕೆ ಅವಕಾಶ ಇರುವ ಸಾಧ್ಯತೆ ಹೆಚ್ಚಿದೆ. ಶಾಸಕರ ಜತೆ ಚರ್ಚಿಸಿ ಅವರ ಸಲಹೆ ಪಡೆದು ಸಿಟಿ ಬಸ್ ಜಾರಿ ಮಾಡುತ್ತೇವೆ ಎಂದು ಮುರಳೀಧರ ಆಚಾರ್ಯ ತಿಳಿಸಿದರು.
ಆಗಸ್ಟ್ ನಲ್ಲಿ ಸಿಬಂದಿ ಆಗಮನ; ಬಳಿಕ ಬಸ್ ಓಡಾಟ ಸುಸೂತ್ರ
ಪುತ್ತೂರು ಡಿವಿಜನ್‌ನಲ್ಲಿ ಕೊರತೆ ಇರುವುದು ಬಸ್ ಅಲ್ಲ, ಚಾಲಕ, ನಿರ್ವಾ ಹಕರದ್ದು. ಒಟ್ಟು 485 ಶೆಡ್ನೂಲ್ ಇದ್ದು ಇದರಲ್ಲಿ 103 ಸಿಬಂದಿ ಕೊರತೆ ಇದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಂದರ್ಶನ ಮುಗಿದು ವೆರಿಫಿಕೇಶನ್ ಪೂರ್ಣಗೊಂಡಿದೆ. ಜುಲೈ ನಲ್ಲಿ ಟ್ರ್ಯಾಕ್ ಟೆಸ್ಟ್ ಆಗಿ ಆಗಸ್ಟ್‌ನಲ್ಲಿ ಕರ್ತವ್ಯಕ್ಕೆ ಬರುವ ನಿರೀಕ್ಷೆ ಇದೆ. ಸಿಬಂದಿ ಲಭ್ಯತೆಯಿಂದ ಬಹುತೇಕ ಸಮಸ್ಯೆ ನಿವಾರಣೆ ಆಗಲಿದ್ದು ಹೆಚ್ಚುವರಿ ಬಸ್ ಓಡಾಟ ಪ್ರಾರಂಭಕ್ಕೆ ತೊಂದರೆ ಉಂಟಾಗದು.
ತಾಲೂಕು ವ್ಯಾಪ್ತಿಗಳಲ್ಲಿ ಏನೇನು ಕ್ರಮ?
ಪುತ್ತೂರು: 3 ಹೆಚ್ಚು ವರಿ ಬಸ್
ಪುತ್ತೂರು ಡಿಪೋದಲ್ಲಿ ಶೇ.10 ರಷ್ಟು ಹೆಚ್ಚುವರಿ ಬಸ್ ಇದೆ. ಸಿಬಂದಿ ನೇಮಕದ ಬಳಿಕ ಕೆಲವು ರೂಟ್‌ಗಳಲ್ಲಿ ಹೆಚ್ಚುವರಿ ಬಸ್ ಓಡಿಸಲಾಗುತ್ತದೆ.
ಪದವಿ ತರಗತಿ ಪ್ರಾರಂಭಗೊಂಡ ಅನಂತರ ಪುತ್ತೂರು- ಉಪ್ಪಿನಂಗಡಿ ಮಾರ್ಗದಲ್ಲಿ ಬೆಳಗ್ಗೆ 8ರಿಂದ 9 ಗಂಟೆಯ ನಡುವೆ ಎರಡು ಹೆಚ್ಚುವರಿ ಬಸ್ ಓಡಾಟ ಪ್ರಾರಂಭಿಸಲಾಗುವುದು.
ಪದವಿ ತರಗತಿ ಆರಂಭವಾದ ಬಳಿಕ ಸುಳ್ಯಪದವಿನಿಂದ ಬೆಟ್ಟಂಪಾಡಿಗೆ ಹೆಚ್ಚುವರಿ ಬಸ್ ಆರಂಭ.
ಬೆಳ್ತಂಗಡಿ: 2 ಹೆಚ್ಚು ವರಿ ಬಸ್
ಮಂಗಳೂರು-ಧರ್ಮಸ್ಥಳ ನಡುವೆ ರಸ್ತೆ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಬಸ್ ಓಡಾಟ ಸಾಧ್ಯವಾಗದೆ ಜನರಿಗೆ ತೊಂದರೆ ಉಂಟಾಗಿದೆ. ಒಂದೊಂದು ಬಾರಿ ಅರ್ಧ, ಒಂದು ಗಂಟೆ ವ್ಯತ್ಯಾಸವಾಗುತ್ತದೆ.
ಬೆಳ್ತಂಗಡಿ-ಉಜಿರೆ-ಚಾರ್ಮಾಡಿ ಕಡೆಗೆ ಇನ್ನೂ ಎರಡು ಹೆಚ್ಚುವರಿ ಬಸ್ ಓಡಾಟದ ಅಗತ್ಯ ಇದ್ದು ಆ ಬಗ್ಗೆ ಕೆಲವೇ ದಿನಗಳಲ್ಲಿ ಕ್ರಮ.
ಬಂಟ್ವಾಳ: 4-6 ಹೆಚ್ಚು ವರಿ ಬಸ್
ಬೆಳಗ್ಗಿನ ಹೊತ್ತಿನಲ್ಲಿ ಬಿ.ಸಿ.ರೋಡ್ ಡಿಪೋದಿಂದ ಮಂಗಳೂರಿಗೆ ಹೆಚ್ಚುವರಿಯಾಗಿ ನಾಲ್ಕರಿಂದ ಆರು ಬಸ್‌ಗಳ ಅಗತ್ಯ ಇದ್ದು ತತ್‌ಕ್ಷಣ ಕ್ರಮ ಕೈಗೊಳ್ಳುತ್ತೇವೆ.
ಕಲ್ಲಡ್ಕ, ಪಡೀಲು ಬಳಿ ರಸ್ತೆ ರೋಡ್ ಬ್ಲಾಕ್ ಆಗಿ ಕೆಲವೊಮ್ಮೆ ಕೆಲವು ಬಸ್‌ಗಳು ಒಂದೇ ಹೊತ್ತಿನಲ್ಲಿ ಒಟ್ಟೊಟ್ಟಿಗೆ ಸಂಚರಿಸುವ ಸ್ಥಿತಿ ಉಂಟಾಗುತ್ತದೆ. ಅಳಿಕೆ, ವಿಟ್ಲ ಭಾಗಕ್ಕೂ ಹೊಸ ಬಸ್ ಹಾಕಲಾಗುತ್ತದೆ.
ಸುಳ್ಯ: ನಾಲ್ಕು ಹೆಚ್ಚುವರಿ ಬಸ್
ಸುಳ್ಯ ಡಿಪೋ ಅನ್ನು ವಿಸ್ತರಿಸಿದರೆ ಶೆಡ್ನೂಲ್ ಸಂಖ್ಯೆ ಹೆಚ್ಚಾಗುತ್ತದೆ. ಆಗ ಬೇರೆ ಬೇರೆ ರೂಟ್‌ಗಳಲ್ಲಿ ಬಸ್ ಓಡಾಟ ಪ್ರಾರಂಭಿಸಬಹುದು.
ಗುತ್ತಿಗಾರು-ಸುಬ್ರಹ್ಮಣ್ಯ ನಡುವೆ ಹೆಚ್ಚುವರಿ ಬಸ್ ಓಡಾಟ ನಡೆಸಲಿದೆ. ಕೊಲ್ಲಮೊಗ್ರು, ಮಡಪ್ಪಾಡಿಗೂ ಹೆಚ್ಚುವರಿ ಬಸ್ ಹಾಕಲಾಗುವುದು.
ತೊಡಿಕಾನ ಮಾರ್ಗದಲ್ಲಿ ಸರಕಾರಿ ಬಸ್ ಬೇಡಿಕೆ ಇದ್ದು ಅನುಮತಿ ಕೇಳಲಾಗಿದೆ.
ಕಡಬ: ಒಂದು ಹೆಚ್ಚು ವರಿ ಬಸ್
ನೆಲ್ಯಾಡಿ-ಕಡಬ ನಡುವೆ ಹೆಚ್ಚುವರಿ ಬಸ್ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು.
ಸೋಮವಾರ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಬಸ್ ರಶ್ ಆಗಿದ್ದು ಇಲ್ಲಿ ಬೆಳಗ್ಗೆ, ಸಂಜೆ ಹೆಚ್ಚುವರಿ ಬಸ್ ಓಡಾಟ ಸದ್ಯವೇ ಆರಂಭ. ಗುಂಡ್ಯದ ಭಾಗದ ವಿದ್ಯಾರ್ಥಿಗಳ ಸಮಸ್ಯೆಯೂ ಅರಿವಿದೆ.
-ಕಿರಣ್ ಪ್ರಸಾದ್ ಕುಂಡಡ್ಕ