Advertisement

Udayavani Campaign: ಬಸ್‌ ಬೇಕೇ, ಬೇಕು- ಕುಂದಾಪುರಕ್ಕಷ್ಟೇ ಅಲ್ಲ, ಭಟ್ಕಳಕ್ಕೂ ಬೇಕು!

02:41 PM Jun 21, 2024 | Team Udayavani |

ಬೈಂದೂರು: ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಿಂದ ಬೈಂದೂರು, ಕುಂದಾಪುರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಗೋಳೇ ಹೇಳ ತೀರದಾಗಿದೆ. ಅದರ ಜತೆಗೆ ಈ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಟ್ಕಳ, ಮುರ್ಡ್ವೇಶ್ವರಕ್ಕೂ ಹೋಗುತ್ತಿದ್ದು, ಅವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಂದರೆ ಬೈಂದೂರಿನ ಬಸ್‌ ಸಮಸ್ಯೆ ದಕ್ಷಿಣ ಧ್ರುವದಿಂ ಉತ್ತರ ಧ್ರುವಕೂ ಹರಡಿಕೊಂಡಿದೆ.

Advertisement

ಶಿರೂರು, ಬೈಂದೂರು, ಕರಾವಳಿ, ದೊಂಬೆ, ಉಪ್ಪುಂದ, ಪಡುವರಿ ಮುಂತಾದ ಭಾಗಗಳ ವಿದ್ಯಾರ್ಥಿಗಳು ಕುಂದಾಪುರ ಕಾಲೇಜುಗಳಿಗೆ ಹೋಗುವವಂತೆಯೇ ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳಿಗೂ ಹೋಗುತ್ತಾರೆ. ನಿಜ ವೆಂದರೆ ಕುಂದಾಪುರ ಭಾಗಕ್ಕೇ ಬಸ್ಸಿನ ವ್ಯವಸ್ಥೆ ಕಡಿಮೆ ಇದೆ. ಭಟ್ಕಳ ಕಡೆಗೆ ಹೋಗುವವರಿಗೆ ಇದಕ್ಕಿಂತಲೂ ಕಡಿಮೆ ವ್ಯವಸ್ಥೆ ಇದೆ. ಸಕಾಲದಲ್ಲಿ ಬಸ್‌ ಇಲ್ಲದೆ ಪಡಬಾರದ ಪಾಡು ಪಡುತ್ತಾರೆ.

ಈ ಭಾಗದ ವಿದ್ಯಾರ್ಥಿಗಳು ಮುಖ್ಯವಾಗಿ ಭಟ್ಕಳದ ಸುಧೀಂದ್ರ ಕಾಲೇಜು, ಅಂಜುಮಾನ್‌ ಡಿಗ್ರಿ ಕಾಲೇಜು ಮತ್ತು ಮುರ್ಡ್ವೇಶ್ವರದ
ಆರ್‌ಎನ್‌ ಎಸ್‌‌ ಐಟಿಐಗೆ ಹೋಗುತ್ತಾರೆ. ಗಡಿ ಭಾಗವಾದ ಶಿರೂರಿನಿಂದ ಭಟ್ಕಳಕ್ಕೆ ಕೇವಲ 8 ಕಿ.ಮೀ. ಇದ್ದರೆ, ಮುರ್ಡ್ವೇಶ್ವರಕ್ಕೆ 22 ಕಿ.ಮೀ. ಇದೆ. ಅದೇ ಶಿರೂರಿನಿಂದ ಕುಂದಾಪು ರಕ್ಕೆ 40 ಕಿ.ಮೀ. ಇದೆ. ಶಿರೂರಿನಿಂದ ಕುಂದಾಪು ರಕ್ಕೆ ಬಸ್‌ ಪ್ರಯಾಣವೇ ಕೆಲವೊಮ್ಮೆ ಒಂದೂವರೆ ಗಂಟೆ ಆಗುವುದುಂಟು. ಹೀಗಾಗಿ ಕೆಲವರು ಶಿಕ್ಷಣಕ್ಕಾಗಿ ಭಟ್ಕಳವನ್ನು ನೆಚ್ಚಿ ಕೊಂಡಿದ್ದಾರೆ. ಶಿರೂರು ಮಾತ್ರವಲ್ಲ, ಬೈಂದೂರು, ಉಪ್ಪುಂದವರೆಗೂ ಭಟ್ಕಳದ ವಿದ್ಯಾರ್ಥಿಗಳಿದ್ದಾರೆ.

ಎಕ್ಸ್‌ಪ್ರೆಸ್‌ ಬಸ್‌ ಗಳ ಕೊರತೆ
ಶಿರೂರು ಭಾಗದಿಂದ ಕುಂದಾಪುರಕ್ಕೆ ಬರುವ ವರ ಇನ್ನೊಂದು ಸಮಸ್ಯೆ ಏನೆಂದರೆ ಎಕ್ಸ್‌ ಪ್ರಸ್‌ ಬಸ್‌. ಒಳರೂಟಿನಿಂದ ಬಂದು ಹೆದ್ದಾರಿ ಸೇರುವ ವಿದ್ಯಾರ್ಥಿಗಳಿಗೆ ಸಮಯದ ಅಭಾವ ಇರುತ್ತದೆ. ಹೀಗಾಗಿ ಅವರಿಗೆ ತ್ವರಿತವಾಗಿ ಕುಂದಾಪುರ ತಲು ಪಲು ಎಕ್ಸ್‌ ಪ್ರಸ್‌ ಬಸ್‌ಗಳ ಅಗತ್ಯತೆ ಇದೆ. ಆದರೆ, ಈ ಮಾರ್ಗದಲ್ಲಿ ಸ್ಥಳೀಯವಾಗಿ ಲೋಕಲ್‌ ಬಸ್‌ ಗಳೇ ಹೆಚ್ಚು. ಎಕ್ಸ್‌ ಪ್ರೆಸ್‌ ಬಸ್‌ ಗಳ
ಸಂಖ್ಯೆ ಕಡಿಮೆ. ಹೀಗಾಗಿ ಎಕ್ಸ್‌ ಪ್ರೆಸ್‌ ಬಸ್‌ ನಲ್ಲಿ 50 ನಿಮಿಷದಲ್ಲಿ ಕ್ರಮಿಸಬಹುದಾದ ಹಾದಿಗೆ ಇಲ್ಲಿ ಒಂದೂವರೆ ಗಂಟೆಯೂ ಆಗುತ್ತದೆ.

ಕನೆಕ್ಟಿಂಗ್‌ ಬಸ್‌ ಗಳ ಸಮಸ್ಯೆ
ಭಟ್ಕಳ ಕಡೆಗೆ ಹೋಗುವವರು ಶಿರೂರು, ಬೈಂದೂರು, ಉಪ್ಪುಂದಗಳಲ್ಲಿ ಬಸ್‌ ಹತ್ತುತ್ತಾ ರಾದರೂ ಅದಕ್ಕಿಂತ ಮೊದಲು ಅವರು ಒಳ ಭಾಗದಿಂದ ಪ್ರಧಾನ ರಸ್ತೆಗೆ ಬರಲು ಬೇರೆ ಬಸ್‌ ಅವಲಂಬಿಸಿರುತ್ತಾರೆ, ಇಲ್ಲವೇ ನಾಲ್ಕೈದು ಕಿ.ಮೀ. ನಡೆದುಕೊಂಡು ಬರಬೇ ಕಾಗುತ್ತದೆ. ಹೆದ್ದಾರಿಗೆ ಬಂದ ಬಳಿಕವೂ ಅವರಿಗೆ ಸಕಾಲದಲ್ಲಿ ಬಸ್‌ ಸಿಗದೆ ತೊಂದರೆಯಾಗುತ್ತದೆ. ಸಂಜೆ ಮರಳಿ ಬರುವಾಗಲೂ ಅದೇ ಸಮಸ್ಯೆ. ಇಲ್ಲಿ ಕನೆಕ್ಟಿಂಗ್‌ ಬಸ್‌ ಗಳ ಕೊರತೆ ಕಾಡುತ್ತದೆ.

Advertisement

ದಿನಕ್ಕೆರಡು ಗಂಟೆ ಬಸ್‌ ಪ್ರಯಾಣ
ಬೈಂದೂರಿನಿಂದ ಕುಂದಾಪುರಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಸ್‌ ಸಂಖ್ಯೆ ಕಡಿಮೆ ಇದೆ. ಇರುವ ಬಸ್ಸಿನಲ್ಲಿ ಉಸಿರು ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿದೆ. ಲೋಕಲ್‌ ಬಸ್‌ ಗಳಲ್ಲಿ ಬಂದರೆ ಮನೆಯಿಂದ ಕುಂದಾಪುರಕ್ಕೆ ಕೆಲವರಿಗೆ ಎರಡು ಗಂಟೆ ಹಿಡಿಯುತ್ತದೆ.
-ಶುಭಾ, ಬಿ.ಕಾಂ. ವಿದ್ಯಾರ್ಥಿನಿ , ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

ದಿನಕ್ಕೊಂದೇ ಬಸ್‌ ನಮಗೆ
ಕಾಲೇಜು ಮುಗಿಸಿ ಮನೆಗೆ ಬರಲು ಇರುವುದೊಂದೆ ಬಸ್‌ ಮಳೆಗಾಲದಲ್ಲಂತೂ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದು.ಕನಿಷ್ಟ
ಪಕ್ಷ ಬಸ್‌ ಸಂಖ್ಯೆ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು.
-ಖುಷಿ ಬಿಲ್ಲವ, ಎಸೆಸೆಲ್ಸಿ ವಿದ್ಯಾರ್ಥಿ, ಸ.ಪ.ಪೂ. ಕಾಲೇಜು ಬೈಂದೂರು

*ಅರುಣಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next