Advertisement
ವಿಶೇಷವಾಗಿ ಹೈಸ್ಕೂಲಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡೂ ಇರುವುದರಿಂದ ಬೇಡಿಕೆ ಪಡೆದುಕೊಂಡಿದೆ. ಆದರೆ, ಇಲ್ಲಿಗೆ ಬರುವ ಮಕ್ಕಳಿಗೆ ಸರಿಯಾದ ಬಸ್ಸು ಸೌಕರ್ಯ ಇಲ್ಲದೆ ಹಿನ್ನಡೆಯಾಗಿದೆ.
*ಮೂಡುಬಿದಿರೆ ಕಡೆಯಿಂದ ಈಗಿರುವ ಬಸ್‌ಗಳ ಜತೆಗೆ ಬೆಳಗ್ಗೆ 9 ಗಂಟೆಗೊಂದು ಬಸ್ಸು ಬಿಡಬೇಕು. ಸಂಜೆ ಅಳಿಯೂರಲ್ಲಿ ಪಿಯುಸಿ 3.15ಕ್ಕೆ, ಹೈಸ್ಕೂಲು 4.15ಕ್ಕೆ ಬಿಡುವುದರಿಂದ ಒಮ್ಮೆಲೇ 500 ಮಕ್ಕಳೂ ಬಸ್ಸಿಗಾಗಿ ಧಾವಿಸುವ ಸ್ಥಿತಿ ಇದೆ. ಈ ರಶ್ ತಪ್ಪಿಸಲು, 3.30, 4.00 ಮತ್ತು 4.30ಕ್ಕೆ ಮೂಡುಬಿದಿರೆ ಹಾದಿಯಲ್ಲಿ ಬಸ್ಸು ಬಿಟ್ಟರೆ ಚೆನ್ನು ಎಂಬ ಅಭಿಪ್ರಾಯವಿದೆ. *ಬೆಳುವಾಯಿ ಕಡೆಯಿಂದ ಬರುವವರು ಅಳಿಯೂರು ಮುಟ್ಟುವಾಗ 9.15 ಆಗುವ ಕಾರಣ ಪ್ರಾರ್ಥನೆ, ಎಸೆಂಬ್ಲಿಗೆ ತಡವಾಗುತ್ತದೆ. ಒಮ್ಮೊಮ್ಮೆ ಸ್ಪೆಶಲ್ ಕ್ಲಾಸಿಗೂ ತಡವಾಗುತ್ತದೆ.
Related Articles
ಸಂಜೆ ಸ್ಟ್ಯಾಂಡಿಗೆ ಬಂದು ಬೆಳುವಾಯಿ ಕಡೆಗೆ ಬಸ್ಸು ಹಿಡಿಯಲು ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ ಎಂದು ಮನ್ವಿತಾ, ಸಿಂಚನಾ,ಸಾನ್ವಿ, ಸಾತ್ವಿಕಾ, ತೃಶಾ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. – ಹೊಸ್ಮಾರು ಕಡೆಗೆ ಸಾಗುವವರೂ ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ. ಇದನ್ನು ನಿವಾರಿಸಲು, ಈ ಎರಡೂ ಮಾರ್ಗಗಳಲ್ಲಿ 4.30-5ರ ನಡುವೆ ಒಂದೊಂದು ಬಸ್ಸು ಇದ್ದರೆ ಅನುಕೂಲ. ಇದೆಲ್ಲವೂ ಗ್ರಾಮೀಣ. ಗುಡ್ಡಕಾಡು ಪ್ರದೇಶವಾದ ಕಾರಣ, ಮನೆ ಮುಟ್ಟುವಾಗ ತಡವಾಗುವ ಆತಂಕವೂ
ಈ ವಿದ್ಯಾರ್ಥಿಗಳನ್ನು ವಿಶೇಷವಾಗಿ ಹುಡುಗಿಯರನ್ನು ಕಾಡುತ್ತಿದೆ.
Advertisement
*ಧನಂಜಯ ಮೂಡುಬಿದಿರೆ