Advertisement

ಜೈವಿಕ-ವೈದ್ಯಕೀಯ ತ್ಯಾಜ್ಯ ಅಪಾಯಕಾರಿ

06:31 PM Aug 31, 2021 | Team Udayavani |

ಬಳ್ಳಾರಿ: ಕರ್ನಾಟಕ ‌ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿನಿಯಮಗಳ ಪ್ರಕಾರ ‌ ತ್ಯಾಜ್ಯವನ್ನು ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿ ಮಾಡುವ ಕುರಿತು ತರಭೇತಿ ಕಾರ್ಯಕ್ರಮಕ್ಕೆ ವಿಮ್ಸ್‌ ನ ನಿರ್ದೇಶಕ ‌ ಡಾ| ಟಿ.ಗಂಗಾಧರಗೌಡ ಅವರು ವಿಮ್ಸ್‌ ನ ಬಿ.ಸಿ. ರಾಯ್‌ ಬೋಧನಾ ಕೊಠಡಿಯಲ್ಲಿ ಸೋಮವಾರ ಚಾಲನೆ ನೀಡಿದರು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ‌ ಅವರು ಮಾತನಾಡಿ, ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಆಸ್ಪತ್ರೆಯ ಅವಿಭಾಜ್ಯ ಪ್ರಕ್ರಿಯೆಯಾಗಿದ್ದು, ಜೈವಿಕ-ವೈದ್ಯಕೀಯ ತ್ಯಾಜ್ಯ ಬಹಳ ಅಪಾಯಕಾರಿ. ಯಾವುದೇ ಸಂದರ್ಭದಲ್ಲಿಯೂ ಅದು ಸಾಮಾನ್ಯ ತ್ಯಾಜ್ಯದೊಂದಿಗೆ ಸೇರದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದರು. ಈ ನಿಟಿ rನಲ್ಲಿ ವಿಮ್ಸ್‌ ಆಸ್ಪತ್ರೆಯ ಸ್ಚಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಶುಶ್ರೂಷಕರು ಹಾಗೂ “ಡಿ’ ಗ್ರೂಪ್‌ ನೌಕರರಿಗೆ ಇಂದಿನಿಂದ ‌ ತರಭೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ತರಬೇತಿ ಕಾರ್ಯಕ್ರಮ ಸೆಪ್ಟೆಂಬರ್ 7ರವರೆಗೆ ನಡಯಲಿದ್ದು, ಆಸ್ಪತ್ರೆಯ ಎಲ್ಲಾ ಶುಶ್ರೂಷಕರು ಹಾಗೂ ಡಿ ಗ್ರೂಪ್‌ ನೌಕರರು ಇದರ ಪ್ರಯೋಜನವ ‌ನ್ನು  ಪ‌ಡೆಯಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶೂಶ್ರೂಕರು ಸೇರಿ ಹಲವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next