Advertisement

ಸುರತ್ಕಲ್‌ ಫ್ಲೈ ಓವರ್‌ ತಳಭಾಗದಲ್ಲಿ ‘ಉದಯರಾಗ’

03:27 PM Jun 04, 2018 | |

ಮಹಾನಗರ : ಸುರತ್ಕಲ್‌ನ ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ರವಿವಾರ ಬೆಳಗ್ಗೆ 6ರಿಂದ 7ರ ತನಕ ಸುರತ್ಕಲ್‌ನ ಫ್ಲೈ ಓವರ್‌ನ ತಳಭಾಗದಲ್ಲಿ ನಡೆಸಿಕೊಂಡು ಬರುತ್ತಿರುವ ‘ಉದಯರಾಗ’ ನಡೆಯಿತು.

Advertisement

ಕರ್ನಾಟಕ ಶಾಸ್ತ್ರೀಯ ಸಂಗೀತದ 3ನೇ ಕಾರ್ಯಕ್ರಮವನ್ನು ಪ್ರಾರ್ಥನಾ ಸಾಯಿನರಸಿಂಹನ್‌ ಅವರು ಇತ್ತೀಚೆಗೆ ನಡೆಸಿದ ಸಂಗೀತ ಕಾರ್ಯಾಗಾರದಲ್ಲಿ ಕಲಿಸಿದ  ಹಾಡುಗಳನ್ನು ಇಲ್ಲಿ ಪ್ರಸ್ತುತಿಪಡಿಸಲಾಯಿತು. ಹಾಡುಗಾರಿಕೆಯಲ್ಲಿ ಧನಶ್ರೀ ಶಬರಾಯ, ಸುಮೇಧಾ ಕೆ.ಎಸ್‌., ವರ್ಷಾ, ವಸುಮತಿ, ವಯಲಿನ್‌ನಲ್ಲಿ ಸುಮೇಧಾ ಅಮೈ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ ಸಹಿತ ಮೊದಲಾದವರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next