ಪೆರ್ಲಂಪಾಡಿ : ಪೆರ್ಲಂಪಾಡಿ ಶ್ರೀ ಉದಯಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ಬೆಳಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ. ಸಂಜೆ ಮಠತ್ತಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತಂದು, ಸಿಆರ್‌ಸಿ ಕಾಲನಿ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಿಂದ ದರಶುನದ ಮೂಲಕ ಉದಯಕ್ಷೇತ್ರಕ್ಕೆ ಆಗಮಿಸಿತ್ತು. ಅನಂತರ ಮೇಲೇರಿ ಅಗ್ನಿಸ್ಪರ್ಶ, ಕುಳಿಚಟ್ಟು ನಡೆಯಿತು.
ರಾತ್ರಿ ಸಾಂಸ್ಕೃತಿಕ ವೇದಿಕೆಯಲ್ಲಿ ಪೆರ್ಲಂಪಾಡಿ ನಾಟ್ಯರಂಗ ಕಲಾ ಕೇಂದ್ರ ವತಿಯಿಂದ ನೃತ್ಯ ನಿನಾದ ಕಾರ್ಯಕ್ರಮ, ಭಸ್ಮಾಸುರ ಮೋಹಿನಿ-ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.
ಬುಧವಾರ ಮುಂಜಾನೆ ಶ್ರೀ ವಿಷ್ಣುಮೂರ್ತಿ ಅಗ್ನಿಪ್ರವೇಶ, ಮಾರಿಕಲಕ್ಕೆ ಹೋಗುವುದು, ಪ್ರಸಾದ ವಿತರಣೆ ಹಾಗೂ ಗುಳಿಗ ನೇಮ ನಡೆಯಿತು.
ಈ ಸಂದರ್ಭ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ತಾರಾಪ್ರಸಾದ್ ರಾಮಕಜೆ, ಕೋಶಾಧಿಕಾರಿ ದೇವದಾಸ್ ಶೆಣೈ, ಜತೆ ಕಾರ್ಯದರ್ಶಿ ಹರೀಶ್ ಕೆ ಕಣಿಯಾರು, ಸದಸ್ಯರಾದ ಕೇಶವ ಗುರಿಕ್ಕಾನ, ಕೃಷ್ಣ ಮಣಿಯಾಣಿ, ಮಾಯಿಲಪ್ಪ ಗೌಡ ಬದಿಯಡ್ಕ, ಎ. ಶಿವರಾಮ ಹೊಳ್ಳ, ಮೋಹನ್ ಕುಮಾರ್ ನೆಲ್ಲಿತ್ತಡ್ಕ, ಮಹಾಲಿಂಗ ಮಣಿಯಾಣಿ, ಎಂ. ಗುರುವಪ್ಪ, ಲಕ್ಷ್ಮಣ ಕೆ.ಎಸ್. ಪೆರ್ಲಂಪಾಡಿ, ವೆಂಕಟರಮಣ ಆಚಾರಿ, ಗುಡ್ಡಪ್ಪ ಗೌಡ ಬರಮೇಲು, ವೀರಪ್ಪ ಗೌಡ ಪೆರ್ಲಂಪಾಡಿ, ಶೀನಪ್ಪ ಗೌಡ ಮಾಲೆತ್ತೋಡಿ, ಜನಾರ್ದನ ಗೌಡ ಮೈರಗುಡ್ಡೆ, ಅಣ್ಣಯ ಗೌಡ ದುಗ್ಗಳ, ಪರಮೇಶ್ವರ ಗೌಡ ಪೆರ್ಲಂಪಾಡಿ, ಗಿರೀಶ್ ಪಾದೆಕಲ್ಲು, ಉದಯ ಭಟ್ ಮೂಲೆತ್ತಡ್ಕ, ಸತ್ಯಾನಂದ ಬರಡಿಮಜಲು, ಗಣೇಶ್ ರೈ ಕೊರಂಬಡ್ಕ, ವಸಂತ ರೈ ಕೊರಂಬಡ್ಕ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರಕ್ಕೆ ಕೊಡುಗೆ
ಒತ್ತೆಕೋಲದ ಪ್ರಯುಕ್ತ ಕ್ಷೇತ್ರಕ್ಕೆ ಆರ್. ಡಿ ಹರೀಶ್ ಕುಧ್ಕುಳಿ ಮತ್ತು ವೀರಪ್ಪ ಗೌಡ ಅವರು ಟೇಬಲ್, ರಾಧಾಕೃಷ್ಣ ಗೌಡ ದೊಡ್ಡಮನೆ ಗೆùಂಡರ್, ಲಕ್ಷ್ಮಣ ಕೆ ದರ್ಖಾಸು ಮಿಕ್ಸಿ, ಗಂಗಾಧರ ಗೌಡ ಕುಂಟಿಕಾನ ಅವರು ಹೊಸ ಕಟ್ಟಡಕ್ಕೆ ಕಬ್ಬಿಣದ ಸಲಕರಣೆಗಳನ್ನು ಹಾಗೂ ಹಲವಾರು ದಾನಿಗಳ ವಸ್ತು ರೂಪದಲ್ಲಿ ಕೊಡುಗೆ ನೀಡಿದರು.