ಪಡುಬಿದ್ರಿ: ಸಮುದ್ರ ಮಥನದಂತೆಯೇ ಕೊರೊನಾ ಸಂಕಷ್ಟ ಗಳ ನಡುವೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲವು ಪುಟಿದೆದ್ದು ನಿಂತಿದೆ. ಇಲ್ಲಿನದಾರು ಶಿಲ್ಪ, ಶಿಲಾ ಶಿಲ್ಪಗಳು ಕಣ್ಣಿಗೆ ಹಬ್ಬವೇ ಸರಿ. ದೇವಸ್ಥಾನದ ಸೊಬಗನ್ನು ಸವಿಯಲು ಇಲ್ಲಿ ತಲೆಯೆತ್ತಿ ನಡೆಯ ಬೇಕಿದೆ. ಶಿಲಾ ಶಿಲ್ಪಗಳ ಉತ್ಕೃಷ್ಟತೆಯೇ ಅನ್ವರ್ಥವಾಗಿ ಉಚ್ಚಿಲದ ಹೆಸರನ್ನು ಶಾಶ್ವತಗೊಳಿಸಿದೆ. ಈ ಮಹಾಲಕ್ಷ್ಮೀಯ ಕಾರುಣ್ಯವು ಸರ್ವ ರಿಗೂ ಹರಿದು ಬರಲಿ ಎಂದು ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಅವರು ಶುಕ್ರವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ನಾಗ ಮಂಡಲೋತ್ಸವದ ಪ್ರಯಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹಿಂದೂ ಧರ್ಮದ ಆಧಾರ ಸ್ತಂಭ ಮೊಗವೀರ ಸಮಾಜವಾಗಿದ್ದು, ಡಾ| ಜಿ. ಶಂಕರ್ ಈ ಸಮಾಜದ ಶಕ್ತಿ ಯಾಗಿ ದ್ದಾರೆ. ನಾನೂ ಎಳವೆಯಲ್ಲಿ ಮೀನು ಮಾರಾಟ ಮಾಡಿಯೇ ಜೀವನದಲ್ಲಿ ಮೇಲಕ್ಕೆ ಬಂದಿದ್ದೇನೆ ಎಂದು ಉಡುಪಿ ಮಾಂಡವಿ ಬಿಲ್ಡರ್ನ ಜೆರ್ರಿ ವಿನ್ಸೆಂಟ್ ಡಯಾಸ್ ಹೇಳಿದರು.
ಗೌರವಾರ್ಪಣೆ
ಕುಂದಾಪುರದ ಸಹಾಯಕ ಕಮಿಷ ನರ್ ರಾಜು ಕೆ., ಉಡುಪಿ ಡಿವೈಎಸ್ಪಿ ಜಯಶಂಕರ್, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಉಡುಪಿಯಲ್ಲಿ ತಹಶೀಲ್ದಾರ್ ಆಗಿದ್ದ ಪ್ರದೀಪ್, ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಬಡಾ ಗ್ರಾ.ಪಂ. ಪಿಡಿಒ ಕುಶಾಲಿನಿ, ಮಟ್ಟಿ ಲಕ್ಷ್ಮೀನಾರಾಯಣ ರಾವ್ ಅವರಿಗೆ ಕ್ಷೇತ್ರದ ವತಿಯಿಂದ ಗೌರ ವಾರ್ಪಣೆ ಮಾಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮೊಗ ವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಾಜಿ ಶಾಸಕ ಯು.ಆರ್. ಸಭಾಪತಿ, ಉದ್ಯಮಿ ಆನಂದ ಸಿ. ಕುಂದರ್, ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉಡುಪಿಯ ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಸಾಯಿರಾಧಾ ಸಮೂಹ ಸಂಸ್ಥೆ ಗಳ ಮನೋಹರ ಶೆಟ್ಟಿ ಕಾಪು, ಬಡಗು ಬೆಟ್ಟು ಕೋ-ಆಪರೇಟಿವ್ ಬ್ಯಾಂಕ್‌ನ ಜಯಕರ ಶೆಟ್ಟಿ ಇಂದ್ರಾಳಿ, ಬಾಕೂìರಿನ ಉದ್ಯಮಿ ಶ್ರೀನಿವಾಸ್ ಶೆಟ್ಟಿ ವೇದಿಕೆಯಲ್ಲಿದ್ದರು.
ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶಂಕರ ಸಾಲ್ಯಾನ್ ವಂದಿಸಿದರು. ಸಂಜೆ ಹಾಲಿಟ್ಟು ಸೇವೆಯಬಳಿಕ ನಾಗಪಾತ್ರಿ ವೇ|ಮೂ| ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ಮತ್ತು ಮುದ್ದೂರು ಶ್ರೀ ವೈದ್ಯನಾಥೇಶ್ವರ ಡಮರು ಮೇಳ ದವರ ಸಮ್ಮಿಲನದೊಂದಿಗೆ ಚತುಃಪವಿತ್ರ ನಾಗಮಂಡಲೋತ್ಸವ ಸಂಪನ್ನಗೊಂಡಿತು.