Advertisement
ಪಿಲಿ ನಲಿಕೆ ವಿಜೇತರುಗುಂಪು ವಿಭಾಗದಲ್ಲಿ ಡಿಡಿ ಗ್ರೂಪ್ಸ್ ಗರ್ಲ್ಸ್ ಟೀಮ್ ನಿಟ್ಟೂರು (ಪ್ರ), ಪಿಲಿ ಪೆಜ್ಜೆ ಟೀಮ್ ಕೊರಂಗ್ರಪಾಡಿ (ದ್ವಿ), ಟೈಗರ್ ಫ್ರೆಂಡ್ಸ್, ಕೊರಂಗ್ರಪಾಡಿ (ತೃ) ಮತ್ತು ಬನ್ನಂಜೆ ಟೈಗರ್ ಪ್ರೋತ್ಸಾಹಕ ಪ್ರಶಸ್ತಿ ಗಳಿಸಿದ್ದು, ವಿಜೇತರಿಗೆ 21,121 ರೂ., 15,115 ರೂ., 10,110 ರೂ. ಹಾಗೂ ಅಂಕಿತಾ ವೈಯಕ್ತಿಕ 5 ಸಾವಿರ ರೂ. ಬಹುಮಾನ ಪಡೆದಿದ್ದಾರೆ. ವೈಯಕ್ತಿಕ ಸೀರೆ ವಿಭಾಗದಲ್ಲಿ ಅಂತ್ರಾ ಕೋಟ್ಯಾನ್ (ಪ್ರ), ರಮ್ಯಾ (ದ್ವಿ), ಅಂಕಿತಾ (ತೃ) ಪ್ರಶಸ್ತಿ ಗಳಿಸಿದರು.
ಮಹಿಳೆಯರ ಸಾಂಪ್ರದಾಯಿಕ ವಿಭಾಗದಲ್ಲಿ ತೃಷಾ ಯು. ಅಂಚನ್ ನಂದಿಕೂರು (ಪ್ರ), ಮೇಘಶ್ರೀ ಉಡುಪಿ (ದ್ವಿ), ವಿದ್ಯಾ ವಿಘ್ನೇಶ್ (ತೃ) ಮತ್ತು ಬಿಂದು, ರೂಪಾ ಶ್ರೀನಾಥ್ ಸಮಧಾನಕರ ಬಹುಮಾನ, ಪುರುಷರ ಐಚ್ಛಿಕ ವಿಭಾಗದಲ್ಲಿ ಕಿರಣ್ ಕುಮಾರ್ ಸುಭಾಸ್‌ನಗರ (ಪ್ರ), ಶ್ರೀಕಾಂತ್ ಆಚಾರ್ ಕಾರ್ಕಳ (ದ್ವಿ), ಪ್ರಥಮ ಕುಮಾರ್ ಸುರತ್ಕಲ್ (ತೃ), ಧೀರೇಶ್ ಸುಳ್ಯ, ಅತುಲ್ ಮಂಗಳೂರು ಸಮಾ ಧಾನಕರ ಬಹುಮಾನ ಗಳಿಸಿದ್ದಾರೆ. ಡಾ| ಜಿ. ಶಂಕರ್ ಮಾತನಾಡಿ, ಮಹಿಳೆಯರ ಪಿಲಿ ನಲಿಕೆಯ ಭಾರೀ ಯಶಸ್ಸು ಮುಂದಿನ ವರ್ಷ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ನೀಡಿದೆ ಎಂದರು.
Related Articles
Advertisement
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ, ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕುಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಬಡಾ ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್ ಮೆಂಡನ್, ಪ್ರಮುಖರಾದ ಸುರೇಶ್ ಕರ್ಕೇರ, ಹರೀಶ್ ಕುಮಾರ್, ಮಮತಾಶ್ರೀ, ರಾಕೇಶ್ ಕಾಂಚನ್ ಬೆಳ್ಳಂಪಳ್ಳಿ, ಮಹಾಲಕ್ಷ್ಮೀ ಕೋ ಆಪ್. ಬ್ಯಾಂಕ್‌ನ ನಿರ್ದೇಶಕರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಸಂಚಾಲಕ ಸತೀಶ್ ಅಮೀನ್ ಪಡುಕೆರೆ ವಂದಿಸಿದರು. ಮಹಾಲಕ್ಷ್ಮೀ ಕೋ ಆಪ್ ಬ್ಯಾಂಕ್ ಸಿಬಂದಿ ವಿಜೇತಾ ಶೆಟ್ಟಿ ನಿರ್ವಹಿಸಿದರು.
ಕಾರ್ಯಕ್ರಮ ವೈವಿಧ್ಯಅ. 21ರ ಬೆಳಗ್ಗೆ 9ಕ್ಕೆ ಚಂಡಿಕಾ ಹೋಮ, 9.30ರಿಂದ ಚಿತ್ರಕಲಾ ಸ್ಪರ್ಧೆ,ಮಧ್ಯಾಹ್ನ ನವದುರ್ಗೆಯರಿಗೆ ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಸಂಜೆಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆ, ರಾತ್ರಿ ಮಹಾ ಪೂಜೆ, ಕಾಂತಾರ ಖ್ಯಾತಿಯ ಮೈಮ್ ರಾಮದಾಸ್, ಶಶಿರಾಜ್ ಕಾವೂರು ಮತ್ತು ಬಳಗದಿಂದ ವರಾಹ ರೂಪಂ ವ್ಹಾ ಪೊರ್ಲುಯಾ ತುಳು, ಕನ್ನಡ ಹಾಗೂ ದೇಶೀಯ ಜಾನಪದ ಸಂಗೀತ ಫ್ಯೂಷನ್ ನಡೆಯಲಿದೆ. 7ರ ಬಾಲೆ, 72ರ
ವೃದ್ಧೆಯ ಹುಲಿ ಹೆಜ್ಜೆ !
7 ವರ್ಷದ ಬಾಲೆ ಆದ್ಯಾ ಮತ್ತು 72 ವರ್ಷ ಪ್ರಾಯದ ಸವಿತಾ ನಾಯಕ್ ಹುಲಿ ವೇಷ ಕುಣಿದಿದ್ದು ಪ್ರೇಕ್ಷಕರ ಭಾರೀ ಕರತಾಡನಕ್ಕೆ ಕಾರಣವಾಯಿತು. ಡಾ| ಜಿ. ಶಂಕರ್ ದಂಪತಿ, ಶಾಸಕ ಯಶ್‌ಪಾಲ್ ಸುವರ್ಣ ಸಹಿತ
ಗಣ್ಯರು ವೇದಿಕೆಯ ಮೇಲೆ ಬಂದು ಇಬ್ಬರನ್ನೂ ಗೌರವಿಸಿದರು.