Advertisement
ಯುವ ದಸರಾ -ನೃತ್ಯ ಸ್ಪರ್ಧೆ : ಅ.3ರ ಸಂಜೆ 6.30ರಿಂದ ನೃತ್ಯ ಸ್ಪರ್ಧೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆದೊರಕಲಿದೆ. ಅ. 4ರ ಸಂಜೆ 6.30ರಿಂದ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ಲೈವ್ ಹಿನ್ನೆಲೆ ಸಂಗೀತ ವಾದನದೊಂದಿಗೆ ನಾಟ್ಯ ನಿಲಯಂ ಮಂಜೇಶ್ವರ ತಂಡದವರಿಂದ ನೃತ್ಯ ವೈವಿಧ್ಯ, ಅ. 5ರ ಸಂಜೆ ಗಂಟೆ 6.15ರಿಂದ
ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಭಜನ ಕುಣಿತ, ರಾತ್ರಿ 7.30ರಿಂದ ಜಿಲ್ಲಾ ಮೊಗವೀರ ಯುವ ಸಂಘಟನೆ ಸದಸ್ಯರಿಂದ
ಸಾಂಸ್ಕೃತಿಕ ಕಾಯಕ್ರಮ, ರಾತ್ರಿ 8.30ರಿಂದ ಗುರು ಕೌಸಲ್ಯ ನಿವಾಸ್ ಮತ್ತು ಬಳಗ, ಎಂ. ಎಸ್. ನಾಟ್ಯಕ್ಷೇತ್ರ ಬೆಂಗಳೂರು ಇವರಿಂದ ಶ್ರೀರಾಮ ಹನುಮಂತ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಕಾರ್ಯಕ್ರಮ ನಡೆಯಲಿದೆ.
Related Articles
ಅ. 8ರ ಸಂಜೆ 6.30ರಿಂದ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ರಾಘವೇಂದ್ರ ಆಚಾರ್ಯ
ಜನ್ಸಾಲೆ ನೇತೃತ್ವದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಯಕ್ಷ ಕಲಾ ತಂಡ ಇವರಿಂದ ಚಕ್ರ ಚಂಡಿಕೆ ಯಕ್ಷಗಾನ, ಅ. 9ರ ಮಧ್ಯಾಹ್ನ 2ರಿಂದ ಯಶಸ್ವಿನಿ ಉಳ್ಳಾಲ್ ಅವರಿಂದ ಗಾನ ಲಹರಿ, ಸಂಜೆ 6.30ರಿಂದ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶ್ರೀ ದೇವಿ ನೃತ್ಯಾರಾಧನ ಕಲಾಕೇಂದ್ರ ಪುತ್ತೂರು ಇದರ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಶಿಷ್ಯೆಯರಿಂದ ನೃತ್ಯ ರಂಜನಿ, ಅ. 10ರ ಸಂಜೆ 6.30ರಿಂದ ಖ್ಯಾತ ಕೀರ್ತನಕಾರ ಡಾ| ಎಸ್.ಪಿ. ಗುರುದಾಸ್ ಮಂಗಳೂರು ಅವರಿಂದ ಹರಿಕಥಾ ಸತ್ಸಂಗ ಲಕ್ಷ್ಮೀ ಕಲ್ಯಾಣ ನಡೆಯಲಿದೆ.
Advertisement
ಅಜಯ್ ವಾರಿಯರ್ ನೇತೃತ್ವದಲ್ಲಿ ಸಂಗೀತ ಸಂಜೆ ಅ. 11ರ ಸಂಜೆ 6.30ರಿಂದ ಕಲಾಮೃತ ತಂಡ ಮಂಗಳೂರು ಅವರಿಂದವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಮತ್ತು ತಂಡ ಬೆಂಗಳೂರು
ಇವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ, ಅ. 12ರ ಬೆಳಗ್ಗೆ 11.30ರಿಂದ ವಿದುಷಿ ಡಾ| ಸುಚಿತ್ರ ಹೊಳ್ಳ ಪುತ್ತೂರು ಅವರಿಂದ
ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪ್ರಯುಕ್ತ ರಾತ್ರಿ 10 ಗಂಟೆಗೆ ಕಾಪು ಬೀಚ್ ನಲ್ಲಿ ಲೈವ್ ಮ್ಯೂಸಿಕ್ ಶೋ ಮತ್ತು ವಿಶೇಷ ಲೇಸರ್ ಶೋ ಪ್ರದರ್ಶನ ನಡೆಯಲಿದೆ
ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ದಸರಾ ಉತ್ಸವ ಸಮಿತಿ
ಅಧ್ಯಕ್ಷ ವಿನಯ್ ಕರ್ಕೇರ ಹಾಗೂ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.