ಸಂಪನ್ನಗೊಂಡಿದೆ. ಉಭಯ ಶ್ರೀಗಳು ಹುಣ್ಣಿಮೆಯಂದು ಚಾತುರ್ಮಾಸ್ಯ ವ್ರತ ಮುಗಿಸಿ ತುಂಗಾ ನದಿಯನ್ನು ದಾಟಿ ಶ್ರೀಮಠಕ್ಕೆ ಆಗಮಿಸಿದರು. ಸಿಮೋಲ್ಲಂಘನ ಕೈಗೊಂಡ ಬಳಿಕ ಜು.9 ರಿಂದ ಆರಂಭಗೊಂಡಿದ್ದ ಚಾತುರ್ಮಾಸ್ಯ ವ್ರತಾಚರಣೆ ಮುಕ್ತಾಯಗೊಂಡಿತು.
Advertisement
ಬುಧವಾರ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ನರಸಿಂಹವನದಿಂದಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀಮಠದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.