Advertisement

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

11:05 PM Apr 30, 2024 | Team Udayavani |

ಚೆಂಗ್ಡು (ಚೀನಾ): ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ “ಎ’ ವಿಭಾಗದ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತದ ಮಹಿಳೆಯರು ಆತಿಥೇಯ ಚೀನಕ್ಕೆ 5-0 ಅಂತರದಿಂದ ಸಂಪೂರ್ಣ ಶರಣಾಗಿದ್ದಾರೆ.  ಈ ನಡುವೆ ಭರವಸೆಯ ಆಟಗಾರ್ತಿ ಅನ್ಮೋಲ್‌ ಖರ್ಬ್ ದ್ವಿತೀಯ ಸಿಂಗಲ್ಸ್‌ ವೇಳೆ ಪಾದದ ನೋವಿನಿಂದ ಅಂಕಣ ತೊರೆಯುವ ಸಂಕಟಕ್ಕೆ ಸಿಲುಕಿದರು.

Advertisement

ಈಗಾಗಲೇ ಕೆನಡಾ ಮತ್ತು ಸಿಂಗಾಪುರವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೂ ಭಾರತದ ನಾಕೌಟ್‌ ಹೋರಾಟಕ್ಕೆ ಈ ಸೋಲಿನಿಂದ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ. ಇ

ಶಾರಾಣಿ ಬರುಹಾ, ಕೆ.ಪ್ರಿಯಾ-ಶ್ರುತಿ ಮಿಶ್ರಾ, ಸಿಮ್ರಾನ್‌ ಸಿಂಗ್‌-ರಿತಿಕಾ ಥಾಕರ್‌, ತನ್ವಿ ಶರ್ಮ ಚೀನಿ ಆಟಗಾರ್ತಿಯರ ಕೈಯಲ್ಲಿ ಪರಾಭವಗೊಂಡರು. ಈ ಸೋಲಿನಿಂದ ಭಾರತ “ಎ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಯಿತು. ಅಜೇಯ ಚೀನಾ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next