Advertisement

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

12:44 AM Apr 28, 2024 | Team Udayavani |

ಚೆಂಗ್ಡು (ಚೀನ): ಕೆನಡಾವನ್ನು 4-1 ಅಂತರದಿಂದ ಮಣಿಸಿದ ಭಾರತದ ವನಿತೆಯರು “ಉಬರ್‌ ಕಪ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ.

Advertisement

“ಎ’ ವಿಭಾಗದ ಪಂದ್ಯದಲ್ಲಿ ಎಡಗೈ ಆಟಗಾರ್ತಿ ಅಶ್ಮಿತಾ ಚಾಲಿಹಾ ವಿಶ್ವದ ನಂ. 25 ಆಟಗಾರ್ತಿ ಮೈಕೆಲ್‌ ಲೀ ಅವರನ್ನು 26-24, 24-22 ಅಂತರದಿಂದ ಮಣಿಸಿದ್ದು ಈ ಪಂದ್ಯದ ಹೈಲೈಟ್‌ ಆಗಿತ್ತು. ಇಶಾರಾಣಿ ಬರುವಾ, ಅನ್ಮೋಲ್‌ ಖರ್ಬ್, ಪ್ರಿಯಾ ಕೆ.-ಶ್ರುತಿ ಮಿಶ್ರಾ ಗೆಲುವು ಸಾಧಿಸಿದ ಇತರರು. ಸಿಮ್ರಾನ್‌ ಸಿಂ -ರಿತಿಕಾ ಥಾಕರ್‌ ಜೋಡಿ ಪರಾಭವಗೊಂಡಿತು.

ಭಾರತ ತಂಡವಿನ್ನು ರವಿವಾರ ಸಿಂಗಾಪುರ್‌, ಮಂಗಳ ವಾರ ಆತಿಥೇಯ ಚೀನ ವಿರುದ್ಧ ಸೆಣಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next