Advertisement

ಉಬರಡ್ಕ: ಪ್ರೇಕ್ಷಕರ ಮನಸೂರೆಗೊಂಡ ಯಕ್ಷವೈಭವ

04:31 PM Jan 06, 2018 | |

ಸುಳ್ಯ : ಶ್ರೀ ನರಸಿಂಹ ಶಾಸ್ತಾವು ಯಕ್ಷ ಕಲಾ ಸಂಘ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ಯಕ್ಷಕಲಾ ಸಂಘದ 2ನೇ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಯಕ್ಷ ವೈಭವ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉಬರಡ್ಕ ಶಾಲಾ ವಠಾರದಲ್ಲಿ ಜರಗಿತು. ಜಿಲ್ಲಾ ಪಂಚಾಯತ್‌ ಸದಸ್ಯ ಹರೀಶ್‌ ಕಂಜಿಪಿಲಿ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಘವ ಡಿ. ರಾವ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಪಂಚಾಯತ್‌ ಅಧ್ಯಕ್ಷ ಹರೀಶ್‌ ಉಬರಡ್ಕ, ಉಪಾಧ್ಯಕ್ಷೆ ಶೈಲಜಾ ಶಂಕರ್‌, ಪಿಡಿಒ ಜಯಪ್ರಕಾಶ್‌, ಮಕ್ಕಳ ಯಕ್ಷ ಕಲಾ ಸಂಘದ ಗೌರವಾಧ್ಯಕ್ಷ ಬೆಳ್ಯಪ್ಪ ಗೌಡ ಮಡ್ತಿಲ, ಉಬರಡ್ಕ ಮಿತ್ತೂರು ನರಸಿಂಹ ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಚ್‌. ಸುರೇಶ್‌, ಜಾತ್ರೆ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾನತ್ತಿಲ, ಉಬರಡ್ಕ ಮಿತ್ತೂರು ಶಾಲಾ ಮುಖ್ಯ ಶಿಕ್ಷಕಿ ಧನಲಕ್ಷ್ಮೀ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಬಳ್ಳಡ್ಕ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಜಯ್‌ಕುಮಾರ್‌ ಉಬರಡ್ಕ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಂಗವಾಗಿ ನೀರಬಿದಿರೆ, ಉಬರಡ್ಕ, ಕಲ್ಲಪಣೆ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಉಬರಡ್ಕ ಮಿತ್ತೂರು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರಗಿತು. ಮಕ್ಕಳ ಯಕ್ಷಕಲಾ ಸಂಘದ ವಿದ್ಯಾರ್ಥಿಗಳಿಂದ ‘ತುಳಸಿ ಮಹಾತ್ಮೆ  ಮತ್ತು ಓಂ ನಮಃ ಶಿವಾಯ’ ಯಕ್ಷಗಾನ ಬಾಲಕೃಷ್ಣ ನಾಯರ್‌ ನೀರಬಿದಿರೆ ಅವರ ನಿರ್ದೇಶನದಲ್ಲಿ ನಡೆಯಿತು. 

ಮಕ್ಕಳ ಯಕ್ಷ ಕಲಾ ಸಂಘದ ಸಂಚಾಲಕ ಬಾಲಕೃಷ್ಣ ನಾಯರ್‌ ನೀರಬಿದಿರೆ, ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಕಾರ್ಯದರ್ಶಿ ಶೋಭಾ ವಿದ್ಯಾನಂದ, ಖಜಾಂಚಿ ಪ್ರೇಮಲತಾ ದಿವಾಕರ್‌, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ಶಶಿಧರ್‌ ನಾಯರ್‌, ಖಜಾಂಚಿ ಹರಿಪ್ರಸಾದ್‌ ಕಾನತ್ತಿಲ ಉಪಸ್ಥಿತರಿದ್ದರು. ರಾಜೇಶ್ವರಿ ಕಾಡುತೋಟ ಸ್ವಾಗತಿಸಿ, ಬಾಲಕೃಷ್ಣ ನಾಯರ್‌ ಪ್ರಸ್ತಾವನೆಗೈದರು. ಮನೋಜ್‌ ಕಾನತ್ತಿಲ ನಿರೂಪಿಸಿದರು. ದಿವಾಕರ ಸೆಟ್ಟಿಹಿತ್ಲು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next