ಕೊಟ್ಟೂರು: ಸಮೀಪದ ಉಜ್ಜಿನಿ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿದ್ದು, ಗ್ರಾಮ ಪಂಚಾಯಿತಿ ಇದ್ದು ಇಲ್ಲದಂತಾಗಿದೆ. ಗ್ರಾಮದಲ್ಲಿ ಎಲ್ಲೆಡೆ ಚರಂಡಿಗಳು ತುಂಬಿ ತುಳುಕುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ.
ಐತಿಹಾಸಿಕ ಸ್ಥಳ, ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಗ್ರಾಮ ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕಾಣದೇ ವಂಚಿತಗೊಂಡಿದೆ. ಸ್ವತ್ಛತೆ ಕಾಣದೆ ಮೂಲ ಸೌಕರ್ಯಗಳಿಂದ ದೂರವುಳಿದಿದೆ. ಗ್ರಾಪಂ ಆಗಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರಸ್ತೆಯಲ್ಲಿ ಸದಾ ತುಂಬಿಕೊಂಡಿರುವ ಕಸದ ರಾಶಿ, ಹಾಳಾದ ಸಿಸಿ ರಸ್ತೆ, ತಗ್ಗು ಗುಂಡಿಗಳಿಂದ ತುಂಬಿರುವ ರಸ್ತೆಗಳು ಕಾಣ ಸಿಗುತ್ತವೆ. ಬೀದಿ ದೀಪಗಳು ಇಲ್ಲದೆ ರಾತ್ರಿ ವೇಳೆ ಜನ ಭಯದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಗ್ರಾಮದಲ್ಲಿ ಸ್ವತ್ಛತೆ ಮರೆಯಾಗಿ ದಿನದಿಂದ ದಿನಕ್ಕೆ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಇದರಿಂದ ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. ಹಿಂದುಳಿದ ಓಣಿಗಳಲ್ಲಿ ಮನೆಯ ಪಕ್ಕದಲ್ಲೇ ಚರಂಡಿಗಳಿಂದು ಅವುಗಳು ತುಂಬಿ ತುಳುಕುತ್ತಿವೆ. ಈ ಬಗ್ಗೆ ಅ ಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ನಾವು ಸರ್ಕಾರದ ಆಸ್ತಿ ಕೇಳುವುದಿಲ್ಲ. ಗ್ರಾಮದಲ್ಲಿ ಸ್ವತ್ಛತೆ ಕಾಪಾಡುವಂತೆ ಕೇಳುತ್ತಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಕಿಚ್ಚಂತೂ ಗಮನ ಹರಿಸುತ್ತಿಲ್ಲ’ ಎಂದು ನಾಗರಿಕರು ದೂರಿದ್ದಾರೆ.
ಉಜ್ಜಿನಿ ಗ್ರಾಮಕ್ಕೆ ಸಂಬಂ ಧಿಸಿದಂತೆ ಶಾಸಕರೂ ಸಹ ಇತ್ತ ಮುಖ ಮಾಡಿಲ್ಲ. ಗ್ರಾಮ ಸ್ವತ್ಛತೆ, ಅಭಿವೃದ್ಧಿ, ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದರೂ ಅದರ ಸದುಪಯೋಗ ಗ್ರಾಮಕ್ಕೆ ಸಿಗುತ್ತಿಲ್ಲ. ಈಗಲಾದರೂ ಸಂಬಂಧಿ ಸಿದ ಅಧಿ ಕಾರಿಗಳು, ಶಾಸಕರು, ಗ್ರಾಪಂನವರು ಗಮನ ಹರಿಸಿ ಗ್ರಾಮದಲ್ಲಿ ಸ್ವತ್ಛತೆ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉಜ್ಜಯಿನಿ ಗ್ರಾಮದ ಜನರಿಗೆ ಮೂ ಲ ಸೌಕರ್ಯ ಒದಗಿಸಲು ಕೂಡಲೇ ಗ್ರಾಪಂ ಅಧಿ ಕಾರಿಗಳಿಗೆ ಸೂಚಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. (ಬಾಬು, ತಾಪಂ ಯೋಜನಾಧಿಕಾರಿಗಳು )
ಐತಿಹಾಸಿಕ ಕೇಂದ್ರವಾದ ಉಜ್ಜಯಿನಿ ಗ್ರಾಮದಲ್ಲಿ ಚರಂಡಿಗಳ ಸ್ವತ್ಛತೆ ಮರೆಯಾಗಿದೆ. ಬೀದಿ ದೀಪಗಳನ್ನು ಸರಿಪಡಿಸಿಲ್ಲ. ರಸ್ತೆ ಇಕ್ಕೆಲಗಳಲ್ಲಿ ಔಷ ಧಿ ಸಿಂಪಡಿಸಿಲ್ಲ. ಇದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಪಂ ಅಧಿ ಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರಾದರೂ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಎಂ. ರವಿಕುಮಾರ