Advertisement
ಪ್ರಮುಖ ಹಣಕಾಸು ಸಂಸ್ಥೆಗಳತವರಾಗಿರುವ ಇಸ್ಲಾಮಿಕ್ ರಾಷ್ಟ್ರವು ಈಗ ಪಾಶ್ಚಾತ್ಯ ವೇಳಾಪಟ್ಟಿಯನ್ನು ಅನು ಸರಿಸಲು ನಿರ್ಧರಿಸಿದೆ. ಅದರಂತೆ ಜ. 1ರಿಂದಲೇ ಇಲ್ಲಿ ಕೆಲಸದ ವಾರವು ಸೋಮ ವಾರದಿಂದ ಶುಕ್ರವಾರದ ವರೆಗೆ ಇರಲಿದ್ದು, ಶನಿವಾರ ಮತ್ತು ರವಿವಾರ ರಜಾ ದಿನವಾಗಿರಲಿದೆ. ಸರಕಾರಿ ಉದ್ಯೋಗಿಗಳಿಗೆ ಶುಕ್ರ ವಾರ (ಮುಸ್ಲಿಮರ ಸಾಂಪ್ರದಾಯಿಕ ರಜಾ ದಿನ) ಅರ್ಧ ದಿನ ಕೆಲಸವಿರುತ್ತದೆ.
ಬಹುತೇಕ ದೇಶಗಳು ಶನಿವಾರ, ರವಿವಾರವನ್ನು ವಾರಾಂತ್ಯದ ರಜಾ ದಿನ ಎಂದು ಪರಿಗಣಿಸುತ್ತಿವೆ. ಈ ದೇಶ ಗಳೊಂದಿಗೆ ಹಣಕಾಸು, ವ್ಯಾಪಾರ, ಆರ್ಥಿಕ ವಹಿವಾಟನ್ನು ಸರಾಗವಾಗಿ ನಡೆಸಲು, ಅಂತಾ ರಾಷ್ಟ್ರೀಯ ಉದ್ದಿಮೆ ನಂಟನ್ನು ಬಲಿಷ್ಠ ಗೊಳಿಸಲು, ಯುಎಇ ಮೂಲದ ಮತ್ತು ಇತರ ಸಾವಿರಾರು ಬಹು ರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Related Articles
ಮುಂದಿನ ದಿನ ಗಳಲ್ಲಿ ಖಾಸಗಿ ಸಂಸ್ಥೆ ಗಳು ಮತ್ತು ಶಾಲೆಗಳು ಕೂಡ ಇದೇ ಮಾದರಿ ಅನುಸರಿಸುವ ಸಾಧ್ಯತೆ ಯಿದೆ. ಜಾಗತಿಕ ಕೆಲಸದ ವಾರ (ವಾರದಲ್ಲಿ 5 ದಿನ)ಕ್ಕಿಂತಲೂ ಕಡಿಮೆ ಅವಧಿಯ ರಾಷ್ಟ್ರೀಯ ಕೆಲಸದ ವಾರವನ್ನು ಪರಿಚಯಿಸು ತ್ತಿರುವ ಮೊದಲ ರಾಷ್ಟ್ರ ನಮ್ಮದು ಎಂದು ಯುಎಇ ಸರಕಾರ ಹೇಳಿದೆ.
Advertisement