Advertisement
ಯುಎಇ ಸರಕಾರದ ನಿಯಮದನ್ವಯ ಕ್ರೀಡಾಕೂಟಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹಾಜರಾಗುವ ಪ್ರೇಕ್ಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಈಗಾಗಲೇ ಬಹುತೇಕ ಜನರಿಗೆ ಇಲ್ಲಿನ ಸರಕಾರ ಲಸಿಕೆ ನೀಡಿದೆ. ಐಪಿಎಲ್ ಪುನರಾರಂಭಕ್ಕೆ ಸುಮಾರು 3 ತಿಂಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಮುಗಿದಿರುತ್ತದೆ ಮತ್ತು ಸೋಂಕಿನ ಪ್ರಮಾಣವೂ ಇಳಿಯಬಹುದು ಎಂಬುದೊಂದು ಲೆಕ್ಕಾಚಾರ. ಆಗ ಶೇ. 50ರಷ್ಟು ಪ್ರೇಕ್ಷಕರನ್ನು ಐಪಿಎಲ್ ಪಂದ್ಯಕ್ಕೆ ಹಾಜರಾಗುವಂತೆ ಮಾಡುವುದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಕಷ್ಟವಾಗದು; ಹೀಗಾಗಿ ಸರಕಾರ ಇದಕ್ಕೆ ಸಮ್ಮತಿ ಸೂಚಿಸಲಿದೆ ಎಂದು ವರದಿಯೊಂದು ತಿಳಿಸಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ದುಬಾೖಗೆ ತೆರಳಲಿದ್ದು, ಐಪಿಎಲ್‌ನ ಉಳಿದ ಪಂದ್ಯಗಳನ್ನು ನಡೆಸುವ ಕುರಿತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪ್ರೇಕ್ಷಕರಿಗೆ ಅನುಮತಿ ನೀಡುವ ವಿಷಯ ಚರ್ಚೆಗೆ ಬರುವ ಸಾಧ್ಯತೆಯೂ ಇದೆ.