Advertisement
ಸೆಹ್ರಾವತ್ ಅವರ ಅಜೇಯ 92 ರನ್ ಮತ್ತು ಶಫಾಲಿ ಅವರ ಸ್ಫೋಟಕ ಆಟದಿಂದಾಗಿ ಭಾರತ ತಂಡವು 16.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ದಕ್ಷಿಣ ಆಫ್ರಿಕಾ ತಂಡವು 5 ವಿಕೆಟಿಗೆ 166 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
Related Articles
Advertisement
ಬಾಂಗ್ಲಾ ಕೈಯಲ್ಲಿ ಆಸ್ಟ್ರೇಲಿಯಕ್ಕೆ ಆಘಾತಈ ಮೊದಲು ನಡೆದ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯ ತಂಡವು “ಎ’ ವಿಭಾಗದಲ್ಲಿ ಬಾಂಗ್ಲಾದೇಶ ತಂಡದೆದುರು 7 ವಿಕೆಟ್‌ಗಳಿಂದ ಸೋಲನ್ನು ಕಂಡು ಆಘಾತಕ್ಕೆ ಒಳಗಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ತಂಡವು ಬಾಂಗ್ಲಾದ ಬಿಗು ಬೌಲಿಂಗ್ ದಾಳಿಯೆದುರು ರನ್ ಪೇರಿಸಲು ಒದ್ದಾಡಿ 5 ವಿಕೆಟಿಗೆ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾ ವನಿತೆಯರು ಕೇವಲ 3 ವಿಕೆಟ್ ಕಳೆದುಕೊಂಡು 18 ಓವರ್‌ಗಳಲ್ಲಿ 132 ರನ್ ಪೇರಿಸಿ ಜಯಭೇರಿ ಬಾರಿಸಿತು. ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 5 ವಿಕೆಟಿಗೆ 130 (ಕ್ಲೇರ್ ಮೂರೆ 52, ಎಲ್ಲಾ ಹೇವಾರ್ಡ್ 32, ಮರುಫಾ ಅಕ್ತೆರ್ 29ಕ್ಕೆ 2, ದಿಶಾ ಬಿಸ್ವಾಸ್ 25ಕ್ಕೆ 2); ಬಾಂಗ್ಲಾದೇಶ 18 ಓವರ್‌ಗಳಲ್ಲಿ 3 ವಿಕೆಟಿಗೆ 132 (ಅಫಿಯಾ ಪ್ರೊಟಾಶಾ 24, ದಿಲಾರಾ ಅಕ್ತೆರ್ 40, ಶೋರ್ನಾ ಅಕ್ತೆರ್ 23 ಔಟಾಗದೆ, ಐನ್ಸ್‌ವರ್ತ್ 9ಕ್ಕೆ 2).