Advertisement

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆ ; ಹಾಲಿ-ಮಾಜಿ ಉಸ್ತುವಾರಿ ಸಚಿವರ ಟ್ವೀಟ್‌ ಸಮರ !

09:37 AM Jul 30, 2020 | mahesh |

ಮಂಗಳೂರು: ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರ ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಚಿವ ಯು.ಟಿ.ಖಾದರ್‌ ಟ್ವೀಟ್‌ ಮೂಲಕ ವಾಕ್ಸಮರ ನಡೆಸಿದ್ದಾರೆ. ಖಾದರ್‌ ಆರೋಪಕ್ಕೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು, ಯಾವುದೇ ಆರೋಪಿ ಯನ್ನು ರಕ್ಷಣೆ ಮಾಡಲು ಇದು ಖಾದರ್‌ ಕಾಲವಲ್ಲ ಎಂದಿದ್ದಾರೆ.

Advertisement

“ಕಾನೂನು ಕೈಗೆತ್ತಿಕೊಂಡರೆ, ನೈತಿಕ ಪೊಲೀಸ್‌ಗಿರಿ ಮಾಡಿದರೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಕ್ಕೆ ದುಷ್ಕರ್ಮಿಗಳು ದ.ಕ. ಡಿಸಿ ಸಿಂಧೂ ಬಿ.ರೂಪೇಶ್‌ ಅವರಿಗೆ ಕೊಲೆ ಬೆದರಿಕೆ ಹಾಕಿದರು. ಸರಕಾರ ಕೊಲೆ ಬೆದರಿಕೆ ಹಾಕಿದವರಿಗೆ ಶಿಕ್ಷೆ ನೀಡುವ ಬದಲು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ನೀಡಿದೆ’ ಎಂದು ಖಾದರ್‌ ಅವರು ಟ್ವೀಟ್‌ ಮೂಲಕ ಆರೋಪಿಸಿದ್ದರು.

ಇದಕ್ಕೆ ಬುಧವಾರ ಬೆಳಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕೋಟ ಅವರು, “ಆಡಳಿತಾತ್ಮಕ ದೃಷ್ಟಿಯಿಂದ ಮಾಡಿದ ವರ್ಗಾವಣೆ ಯನ್ನು ಖಾದರ್‌ ಅವರು ರಾಜಕೀಯಗೊಳಿಸಿದ್ದು, ದುರದೃಷ್ಟಕರ. ಖಾದರ್‌ ತಮ್ಮ ಮಾತನ್ನು ಹಿಂಪಡೆಯಬೇಕು. ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದವರವರ ಮೇಲೆ
ಗೃಹ ಇಲಾಖೆ ಸ್ವಯಂ ಪ್ರೇರಿತವಾದ ಪ್ರಕರಣ ದಾಖಲಿಸಿದೆ. ಜಿಲ್ಲೆಯಲ್ಲಿ ಖಾದರ್‌ರವರ ಕಾಲದಲ್ಲಿ ಪೊಲೀಸರಿಗೆ ಬೆದರಿಕೆ, ಹಲ್ಲೆ ಮಾಡುವಂತಹ, ಗೂಂಡಾಗಿರಿ ನಡೆಯುತ್ತಿತ್ತು. ಇವತ್ತು ಖಾದರ್‌ ಕಾಲ ಅಲ್ಲ ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು’ ಎಂದು ಕೋಟ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next