Advertisement
ಮಂಗಳವಾರ ನಡೆದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ತಲೈವಾಸ್ ಗೆಲುವಿಗೆ ಕಾರಣವಾಗಿದ್ದು, ಅಜಯ್ ಠಾಕೂರ್ ಅಬ್ಬರದ ರೈಡಿಂಗ್. ಒಮ್ಮೆ ಅಜಯ್ ವಿಫಲವಾದರೆ ತಲೈವಾಸ್‌ಗೆ ಮತ್ತೂಂದು ಸೋಲಾಗುವುದು ಖಚಿತ ವಾಗಿತ್ತು.
ಪಂದ್ಯ ಆರಂಭದಿಂದ ಮುಂಬೈ ಭರ್ಜರಿ ಪ್ರದರ್ಶನ ಆರಂಭಿಸಿತು. ಇದರಿಂದಾಗಿ ಅಂಕಗಳಿಕೆಯಲ್ಲಿ ಮುಂಬಾ ಮೇಲುಗೈ ಸಾಧಿಸುತ್ತಾ ಸಾಗಿತು. ಮೊದಲ ಅವಧಿಯ ಅಂತ್ಯದಲ್ಲಿ ಮುಂಬಾ 18-15ರಿಂದ ಮುನ್ನಡೆ ಪಡೆದಿತ್ತು. ಹೀಗಾಗಿ ಮುಂಬಾ ಮೇಲುಗೈ ಉಳಿಸಿಕೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ತಲೈವಾಸ್ 2ನೇ ಅವಧಿಯ ಅಂತ್ಯದಲ್ಲಿ ಅಬ್ಬರಿಸಿತು. ಪಂದ್ಯ ಮುಗಿಯಲು 4 ನಿಮಿಷ ಇರುವಾಗ ತಿರುಗೇಟು ನೀಡಿತು. ಇನ್ನೇನು ಪಂದ್ಯ ಮುಗಿಯಲು ಮೂರೇ ನಿಮಿಷ ಇರುವಾಗ ತಲೈವಾಸ್ 33-33 ರಿಂದ ಸಮಬಲಕ್ಕೆ ಬಂತು. ಅನಂತರದ ಹಂತದಲ್ಲಿ ಮುಂಬೈ ಹಿನ್ನಡೆ ಅನುಭವಿಸಿತು. ಇದರಿಂದಾಗಿ ತಲೈವಾಸ್‌ಗೆ ಗೆಲುವು ಬಲಿಯಿತು. ಈ ಹಿಂದೆ ತಲೈವಾಸ್ ಸತತ 6 ಪಂದ್ಯದಲ್ಲಿ ಸೋತು ಹೀನಾಯ ಸ್ಥಿತಿಯಲ್ಲಿತ್ತು. ಈ ಗೆಲುವು ತಲೈವಾಸ್ ಆಟಗಾರರಲ್ಲಿ ಸ್ವಲ್ಪಮಟ್ಟಿಗೆ ಹುಮ್ಮಸ್ಸು ಹುಟ್ಟಿಸಿದೆ. ಪಂದ್ಯದಲ್ಲಿ ತಲೈವಾಸ್ ಪರ ಅಜಯ್ ಠಾಕೂರ್ 16 ಅಂಕ ಸಂಪಾದಿಸಿದರೆ, ಪ್ರಪಂಜನ್ 6 ಅಂಕ ಪಡೆದರು. ಮುಂಬೈ ಪರ ದರ್ಶನ್ 8, ಶ್ರೀಕಾಂತ್ 7 ಅಂಕ ಸಂಪಾದಿಸಿದರು.
Related Articles
Advertisement
ಜೈಪುರ ಪರಾಜಯ: ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಜೈಪುರವನ್ನು ದಬಾಂಗ್ ಡೆಲ್ಲಿ 35-34 ಅಂಕಗಳಿಂದ ಸೋಲಿಸಿತು. ಬುಧವಾರದ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ -ದಬಾಂಗ್ ಡೆಲ್ಲಿ ಹಾಗೂ ಜೈಪುರ ಪಿಂಕ್ ಪ್ಯಾಂಥರ್ -ಹರ್ಯಾಣ ಸ್ಟೀಲರ್ ಮುಖಾಮುಖೀ ಆಗಲಿವೆ.