Advertisement

ಇನ್‌ಫೋಸಿಸ್‌ ಮಧ್ಯಾವಧಿ ಎಂಡಿ, ಸಿಇಓ ಪ್ರವೀಣ್‌ ರಾವ್‌ ಯಾರು ?

11:25 AM Aug 18, 2017 | |

ಹೊಸದಿಲ್ಲಿ : ಭಾರತೀಯ ಕಾರ್ಪೊರೇಟ್‌ ಜಗತ್ತಿನ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಐಟಿ ದಿಗ್ಗಜ ಇನ್‌ಫೋಸಿಸ್‌ ಕಂಪೆನಿಯ ಎಂಡಿ ಹಾಗೂ ಸಿಇಓ ಆಗಿರುವ ವಿಶಾಲ್‌ ಸಿಕ್ಕಾ ಅವರಿಂದು ಶುಕ್ರವಾರ  ತಮ್ಮ ಹುದ್ದೆಗೆ ಹಠಾತ್‌ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ತಾತ್ಕಾಲಿಕ ಅವಧಿಗೆ ಯು ಬಿ ಪ್ರವೀಣ್‌ ರಾವ್‌ ಅವರನ್ನು ಇನ್‌ಫೋಸಿಸ್‌ ಆಡಳಿತ ಮಂಡಳಿ ನೇಮಿಸಿದೆ. 

Advertisement

ಯಾರು ಈ ಪ್ರವೀಣ್‌ ರಾವ್‌ ?

ಪ್ರವೀಣ್‌ ರಾವ್‌ ಅವರು ಇನ್‌ಫೋಸಿಸ್‌ ಬಿಪಿಓ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾವ್‌ ಅವರು ಕಂಪೆನಿಯ ಚೀಫ್ ಆಪರೇಟಿಂಗ್‌ ಆಫೀಸರ್‌ ಆಗಿದ್ದುಕೊಂಡು ಕಂಪೆನಿಯ ಒಟ್ಟಾರೆ ವ್ಯೂಹಗಾರಿಕೆ ಮತ್ತು ಕಾರ್ಯನಿರ್ವಹಣೆ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.

ರಾವ್‌ ಅವರು ಕಂಪೆನಿಯ ಜಾಗತಿಕ ಮಾರಾಟ, ಪೂರೈಕೆ ಹಾಗೂ ಉದ್ಯಮ ಪೂರಕ ಕಾರ್ಯನಿರ್ವಹಣೆಗಳನ್ನು ನಿಭಾಯಿಸಿಕೊಂಡಿದ್ದಾರೆ. 

Advertisement

ಕಂಪೆನಿಯ ಪ್ರಮುಖ ಪ್ರಕ್ರಿಯೆಗಳ ಹೊಣೆಗಾರಿಕೆ, ವ್ಯವಸ್ಥೆ ಮತ್ತು ನೀತಿಗಳ ನಿರ್ವಹಣೆ, ಗ್ರಾಹಕ ಬಾಂಧವ್ಯ ನಿರ್ವಹಣೆ, ಪರಿಣಾಮಕಾರಿ ಮಾರಾಟ ನಿರ್ವಹಣೆ, ಪೂರೈಕೆಯಲ್ಲಿನ ಉತ್ಕೃಷ್ಟತೆ, ಗುಣಮಟ್ಟ ಸಂರಕ್ಷಣೆ, ಪ್ರತಿಭಾಪೂರ್ಣ ಆಡಳಿತೆಯ ರೂಪಣೆ, ನಾಯಕತ್ವ ಅಭಿವೃದ್ದಿ ಮುಂತಾದ ಜವಾಬ್ದಾರಿಗಳನ್ನು ನಿಭಾಯಿಸಿರುವ ರಾವ್‌ ಅವರಿಗೆ 30 ವರ್ಷಗಳ ಸುದೀರ್ಘ‌ ಅನುಭವವಿದೆ. 

ರಾವ್‌ ಇನ್‌ಫೋಸಿಸ್‌ ಸೇರಿದ್ದು 1986ರಲ್ಲಿ . ಬೆಂಗಳೂರು ವಿವಿಯಿಂದ ಇವರು ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. 

ನ್ಯಾಸ್‌ಕಾಂ ನ ಕಾರ್ಯಕಾರಿ ಮಂಡಳಿ ಮತ್ತು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟದ ರಾಷ್ಟ್ರೀಯ ಮಂಡಳಿಯ ಸದಸ್ಯರೂ ಆಗಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next