ಹೊಸದಿಲ್ಲಿ: ಭಾರತದ ಅಂಡರ್-23 ವಿಭಾಗದ ಅತೀ ವೇಗದ ಓಟಗಾರ್ತಿ ತರಣ್‌ಜೀತ್ ಕೌರ್ “ನಾಡಾ’ ನಡೆಸಿದ ಡೋಪ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದಾರೆ.
ಅವರು ತೆಗೆದುಕೊಂಡ ನಿಷೇಧಿತ ಪದಾರ್ಥ ಯಾವುದು ಎಂಬುದನ್ನು ನಾಡಾ ತಿಳಿಸಿಲ್ಲ. ಇದು ಸಾಬೀತಾದಲ್ಲಿ ಕೌರ್ 4 ವರ್ಷಗಳ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.
20 ವರ್ಷದ, ಹೊಸದಿಲ್ಲಿ ಮೂಲದ ಕೌರ್ ಕಳೆದ ಯು-23 ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಮತ್ತು 200 ಮೀ. ರೇಸ್‌ನಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ್ದರು. ಕ್ರಮವಾಗಿ 11.54 ಸೆಕೆಂಡ್ಸ್ ಹಾಗೂ 23.57 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿದ್ದರು. ಇದಕ್ಕೂ ಒಂದು ವಾರ ಮೊದಲು ನಡೆದ ನ್ಯಾಶನಲ್ ಓಪನ್ ಚಾಂಪಿಯನ್‌ಶಿಪ್ ಕೂಟದ 100 ಮೀ. ಓಟದಲ್ಲಿ ಚಿನ್ನ ಹಾಗೂ 200 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್-ಟೈಟಾನ್ಸ್, ಮುಂಬಾ-ಯೋಧ ಟೈ ರೋಮಾಂಚನ