Advertisement

World Cup : ಯು-19 ವಿಶ್ವಕಪ್‌ ಭಾರತ ಅಜೇಯ

10:49 PM Jan 28, 2024 | Team Udayavani |

ಬ್ಲೋಮ್‌ಫಾಂಟೀನ್‌: ಅಮೆರಿಕವನ್ನು 201ರನ್ನುಗಳ ಭಾರೀ ಅಂತರದಿಂದ ಮಣಿಸಿದ ಭಾರತ ಐಸಿಸಿ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯ ಲೀಗ್‌ ಅಭಿಯಾನವನ್ನು ಅಜೇಯವಾಗಿ ಮುಗಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಭಾರತದ ಕಿರಿಯರ ತಂಡ 5 ವಿಕೆಟಿಗೆ 326 ರನ್‌ ಪೇರಿಸಿದರೆ, ಜವಾಬಿತ್ತ ಅಮೆರಿಕದ ಕಿರಿಯರ ತಂಡ 8 ವಿಕೆಟಿಗೆ ಕೇವಲ 125 ರನ್‌ ಮಾಡಿತು.ಆರಂಭಕಾರ ಅರ್ಶಿನ್‌ ಕುಲಕರ್ಣಿ ಅವರ ಶತಕ (108) ಭಾರತದ ಸರದಿಯ ಆಕರ್ಷಣೆ ಆಗಿತ್ತು. ಮುಶೀರ್‌ ಖಾನ್‌ 73 ರನ್‌ ಹೊಡೆದರು.

Advertisement

ಭಾರತೀಯ ಆಟಗಾರರನ್ನೇ ಒಳಗೊಂಡ ಅಮೆರಿಕ ಯಾವ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಒಂದೇ ಸಮನೆ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಉತ್ಕರ್ಷ್‌ ಶ್ರೀವಾಸ್ತವ ಸರ್ವಾಧಿಕ 40 ರನ್‌ ಹೊಡೆದರು. ನಮನ್‌ ತಿವಾರಿ 20ಕ್ಕೆ 4 ವಿಕೆಟ್‌ ಹಾರಿಸಿ ಹೆಚ್ಚಿನ ಯಶಸ್ಸು ಸಂಪಾದಿಸಿದರು.

ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್‌ಗೆ ಸೋಲುಣಿಸುವ ಮೂಲಕ ಭಾರತ ಸೂಪರ್‌ ಸಿಕ್ಸ್‌ ಪ್ರವೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next