ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಗ್ರಾಪಂ ಅನ್ನು ಪಪಂಆಗಿ ಮೇಲ್ದರ್ಜೆಗೇರಿಸುವವರೆಗೂ ಎಷ್ಟು ಬಾರಿ ಚುನಾವಣೆ ಘೋಷಿಸಿದರೂಚುನಾವಣೆಗೆ ಯಾರೂ ನಾಮಪತ್ರಸಲ್ಲಿಸದೇ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತರಾಜು ಹೇಳಿದರು.
ತಾಲೂಕಿನ ತ್ಯಾಮಗೊಂಡ್ಲು ಗ್ರಾಪಂಗೆ2ನೇ ಬಾರಿ ಘೋಷಣೆಯಾಗಿರುವ ಚುನಾವಣೆ ಬಹಿಷ್ಕರಿಸಲು ನಡೆಸಿದಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಬಾರಿಯ ಚುನಾವಣೆ ಬಹಿ ಷ್ಕರಿಸಿದಂತೆಯೇ ಈ ಬಾರಿಯ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಹಾಗೂ ನಾವು ಈಗಾಗಲೇ ಕಳೆದ 2 ತಿಂಗಳಿಂದಎಲ್ಲಾ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಈ ವಿಚಾರವಾಗಿ ಚರ್ಚಿಸಿದ್ದೇವೆ. ಅವರೂ ಸಕಾರಾತ್ಮಕವಾದ ಭರವಸೆ ನೀಡಿ ದ್ದಾರೆ. ಆದರೆ, ಅಧಿಕಾರಿಗಳು ಬೇಕಾದ ದಾಖಲೆಗಳನ್ನು ಒದಗಿಸಿಕೊಡುವಲ್ಲಿ ಜಾಣಕುರುಡುತನ ಪ್ರದರ್ಶಿಸುತ್ತಿ ದ್ದಾರೆ. ಇದ್ದರಿಂದ ಗ್ರಾಮಗಳಅಭಿವೃದ್ಧಿಗೆಅಧಿಕಾರಿಗಳೇ ಮುಳ್ಳಾಗಿರುವುದು ಬೇಸರದ ಸಂಗತಿ ಎಂದರು.
ಪ್ರತಿಭಟನೆಗೆ ಸಿದ್ಧತೆ: ಕಳೆದ 2ವರ್ಷ ಗಳಿಂದಲೂ ಅಧಿಕಾರಿಗಳ ಗಮನಕ್ಕೆತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಹೀಗಾಗಿ ಪಟ್ಟಣ ಬಂದ್‌ಮಾಡುವ ಮೂಲಕ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸತ್ಯಾಗ್ರಹನಡೆಸುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ಮಹಿಮಣ್ಣ ತಿಳಿಸಿದರು.
ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಜಿಪಂ ಮಾಜಿ ಸದಸ್ಯಕುಮಾರಸ್ವಾಮಿ ಮೊದಲಿಯರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಸಾದತ್‌ವುಲ್ಲ, ವಾಸುದೇವಮೂರ್ತಿ, ಜಗದೀಶ್,ಜಗದೀಶ್ ಪ್ರಸಾದ್, ಗ್ರಾಮದ ಮುಖಂಡರಾದ ಗಂಗಭೈರಪ್ಪ, ಮಂಜುನಾಥ್,ಸುಂದರ್ ರಾಜು, ಸುಜಿತ್ ಕುಮಾರ್, ಪ್ರಕಾಶ್ ಬಾಬು, ಶಂಕರಪ್ಪ, ಅತಿಕ್,ರಫೀ, ಅಶ್ವತ್, ಪ್ರದೀಪ್ ಕುಮರ್,ರಕ್ಷಿತ್, ಗಂಗಮ್ಮ, ಗ್ರಾಮದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.