Advertisement

ಬಾಲ್ಯ ವಿವಾಹ ಮಾಡಿದರೆ ಎರಡು ವರ್ಷ  ಶಿಕ್ಷೆ ಮತ್ತು ದಂಡ : ಯಲ್ಲಪ್ಪ ಗದಾಡಿ

08:27 PM Mar 06, 2022 | Team Udayavani |

ಮೂಡಲಗಿ:  18 ವರ್ಷ ದೊಳಗಿನ ಹೆಣ್ಣುಮಕ್ಕಳಿಗೆ, 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿದರೆ ಅದು ಬಾಲ್ಯ ವಿವಾಹ  ವಾಗುತ್ತದೆ, ಅದು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ ಬಾಲ್ಯ ವಿವಾಹ ಮಾಡಿದರೆ ಎರಡು ವರ್ಷ  ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ, ಪ್ರತಿಯೊಂದು ಬಾಲ್ಯ ವಿವಾಹ ಸಹ ಅಸಿಂಧೂ ವಾಗಿರುತ್ತದೆ. ಆದ್ದರಿಂದ ಎಲ್ಲರೂ ಬಾಲ್ಯವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಯಲ್ಲಪ್ಪ ಗದಾಡಿ ಹೇಳಿದರು.

Advertisement

ರವಿವಾರ ಮೂಡಲಗಿ ಪಟ್ಟಣದ ಚೈತನ್ಯ ವಸತಿ ಶಾಲೆಯ ಸಭಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕ ಪಂಚಾಯತ, ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಬಾಲ್ಯವಿವಾಹ ನಿಷೇಧ ಪ್ರತಿಜ್ಞಾವಿಧಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು  ಬಾಲ್ಯ ನಿಷೇಧ ಕಾಯ್ದೆ ತಿದ್ದುಪಡಿ ಬಗ್ಗೆ ವಿವರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಅಜಿತ್  ಮನಿಕೇರಿ ಅವರು ಎಲ್ಲ ಜನಪ್ರತಿನಿಧಿಗಳಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಸಿಪಿಐ ವೆಂಕಟೇಶ್ ಮುರನಾಳ ಮಾತನಾಡಿ,  ಬಾಲ್ಯ ವಿವಾಹ ನಡೆಯುವ ಸಂದರ್ಭಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಬಾಲ್ಯ ವಿವಾಹದಿಂದ ಮಾನಸಿಕವಾಗಿ, ದೈಹಿಕವಾಗಿ, ಶೈಕ್ಷನಿಕವಾಗಿ ಕೆಟ್ಟ ಪರಿಣಾಮ ಬೀರುತ್ತವೆ, ತಾಲೂಕಿನಾದ್ಯಾಂತ ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಬೇಕು, ಗ್ರಾಮ ಮಟ್ಟದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ ದ ತಿಳುವಳಿಕೆ ಕಾರ್ಯಕ್ರಮ  ನಡೆಸಬೇಕೆಂದ ಅವರು ಬಾಲ್ಯ ವಿವಾಹ ಸಾಮಾಜಿಕ ಪೀಡುಗನ್ನು  ತಡೆಯುವಲ್ಲಿ ಎಲ್ಲ ಜನಪ್ರತಿನಿಧಿಗಳು, ಮುಖಂಡರ ಸಹಾಯ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ಸಮಾರಂಭವನ್ನು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರು ಮತ್ತು ಅಧಿಕಾರಿಗಳು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು ಉದ್ಘಾಟಿಸಿದರು.

Advertisement

ಸಮಾರಂಭದಲ್ಲಿ ವೇದಿಕೆಯಲ್ಲಿ  ಸಮುದಾಯ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿ ಡಾ.ದೀಪಾ ಮಾಚಪ್ಪನವರ,  ಪುರಸಭೆ ಸದಸ್ಯರಾದ ಜಯಾನಂದ ಪಾಟೀಲ, ರವಿ ಸಣ್ಣಕ್ಕಿ, ಶಿವು ಚಂಡಕಿ, ಶಿವು ಸಣ್ಣಕ್ಕಿ, ಆನಂದ ಟಪಾಲದಾರ, ಈರಪ್ಪ ಮುನ್ಯಾಳ, ಸಿದ್ದಪ್ಪ ಮಗದುಮ್, ಪಾಂಡು ಮಹೇಂದ್ರಕರ, ಅನ್ವರ ನದಾಫ್, ಬಸು ಝಂಡೇಕುರಬರ, ಪ್ರಕಾಶ ಮುಗಳಖೋಡ, ಕಂದಾಯ ಇಲಾಖೆಯ ಎಸ್.ಬಿ.ಹೊಸಮನಿ,  ಚೈತನ್ಯ ವಸತಿ ಶಾಲೆಯ  ಮುಖ್ಯೋಪಾಧ್ಯಾಯೆ ಸಂಧ್ಯಾ ಪಾಟೀಲ ಹಾಗೂ ಸಮಾರಂಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀಶಕ್ತಿ ಸಂಘದ ಮಹಿಳೆಯರು, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು,  ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚೈತನ್ಯ ವಸತಿ ಶಾಲೆಯ  ಶಿಕ್ಷಕ ರವಿ ಬರಮಾನಾಯ್ಕ ಸ್ವಾಗತಿಸಿ ವಂದಿಸಿದರು, ಅಂಗನವಾಡಿ ಕಾರ್ಯಕರ್ತೆ  ಮಾಲತ್ತಿ ಸಪ್ತಸಾಗರ ಪ್ರಾರ್ಥಿಸಿದರು, ಮೇಲ್ವಿಚಾರಕಿ  ಯಮುನಾ ತಳವಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next