Advertisement

Mangaluru ಎರಡು ಕಡೆ ದ್ವಿಚಕ್ರ ವಾಹನಗಳ ಕಳವು

12:16 AM Apr 07, 2024 | Team Udayavani |

ಮಂಗಳೂರು: ನಗರದ ಎರಡು ಕಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

Advertisement

ಕೊಟ್ಟಾರಚೌಕಿ ಫ್ಲೈ ಓವರ್‌ ಎದುರಿನ ಅಂಗಡಿಯೊಂದರ ಬಳಿ ಎ. 4ರಂದು ಲೋಕೇಶ್‌ ಕುಮಾರ್‌ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದೆ. ಅವರು ಮಧ್ಯಾಹ್ನ 2 ಗಂಟೆಗೆ ದ್ವಿಚಕ್ರ ವಾಹನ ಪಾರ್ಕ್‌ ಮಾಡಿ ಬೀಗವನ್ನು ಅದರಲ್ಲೇ ಬಿಟ್ಟು ಅಂಗಡಿಗೆ ಹೋಗಿದ್ದರು. 5 ನಿಮಿಷದ ಅನಂತರ ವಾಪಸ್‌ ಬಂದು ನೋಡಿದಾಗ ವಾಹನ ಕಳ ವಾಗಿತ್ತು. ಕಳವಾದ ವಾಹನದ ಅಂದಾಜು ಮೌಲ್ಯ 95,000 ರೂ. ಎಂಬುದಾಗಿ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.

ಮತ್ತೊಂದು ಪ್ರಕರಣ
ಸುಕೇಶ್‌ ಅವರು ದ್ವಿಚಕ್ರ ವಾಹನವನ್ನು ಮಾ. 21ರಂದು ಬೆಳಗ್ಗೆ 9.20ಕ್ಕೆ ನಗರದ ಪಿವಿಎಸ್‌ ವೃತ್ತದ ಬಳಿ ಇರುವ ಕಾರು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದರು. ಕೆಲಸ ಮುಗಿಸಿ ಸಂಜೆ 5.30ಕ್ಕೆ ವಾಪಸ್‌ ಬಂದು ನೋಡಿದಾಗ ವಾಹನ ಕಳವಾಗಿತ್ತು. ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next