ನವದೆಹಲಿ:ಭಾರತದ ರೈತರನ್ನು ಕಾವಲು ಕಾಯುತ್ತಿದ್ದ ವೇಳೆ ಭಾರತದ ಗಡಿ ಕಾವಲು ಪಡೆಯ (BSF) ಯೋಧರ ಮೇಲೆ ಬಾಂಗ್ಲಾದೇಶದ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಗಡಿ ಕಾವಲು ಪಡೆಯ ಯೋಧರ ಮೇಲೆ ನಡೆದ ಈ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದಾಳಿಯಿಂದ ಆಕ್ರೋಶಗೊಂಡಿರುವ ಬಿಎಸ್‌ಎಫ್ ಬಾಂಗ್ಲಾದೇಶ ಗಡಿ ಭದ್ರತಾ ಪಡೆಯ ಜೊತೆಗೆ ಧ್ವಜ ಸಭೆಯನ್ನು ಕರೆದಿದೆ.
ಬಂಗಾಲ ಗಡಿಯ ಬೆಹ್ರಾಂಪೋರ್ ಸೆಕ್ಟರ್‌ಗೆ ಸೇರಿದ ನಿರ್ಮಲ್‌ಚರ್ ಎಂಬ ಪ್ರದೇಶದಲ್ಲಿ ಘಟನೆ ಸಂಭವಿಸಿದೆ ಎಂದು ಬಿಎಸ್ಎಫ್ ಹೇಳಿದೆ.
ಬಾಂಗ್ಲಾದ ಕೃಷಿಕರು ತಮ್ಮ ಹಸುಗಳನ್ನು ಭಾರತದ ರೈತರ ಕೃಷಿ ಪ್ರದೇಶದೊಳಗೆ ಬಿಟ್ಟು ಕೃಷಿಗೆ ಹಾನಿ ಮಾಡಿದ್ಧಾರೆ. ಹೀಗಾಗಿ ನಮ್ಮ ರಕ್ಷಣೆಗಾಗಿ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಧಾವಿಸಿ ಬಂದಿದ್ದರು.ಭಾನುವಾರ ಎಂದಿನಂತೆ ಭಾರತದ ಪ್ರದೇಶದೊಳಗೆ ಹಸುಗಳನ್ನು ಕೊಂಡು ಬಂದ ಬಾಂಗ್ಲಾ ರೈತರನ್ನು ನಮ್ಮ ಯೋಧರು ತಡೆದು ನಿಲ್ಲಿಸಿದ್ದಾರೆ. ಆ ವೇಳೆಗೆ ಸುಮಾರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಬಾಂಗ್ಲಾದ ಗ್ರಾಮವೊಂದರ ಜನ ಹರಿತವಾದ ಆಯುಧಗಳನ್ನು ಹಿಡಿದು ಭಾರತೀಯ ಗಡಿ ಭದ್ರತಾ ಪಡೆ ಯೋಧರ ಮೇಲೆ ಆಕ್ರಮಣ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ಧಾರೆ ಎಂದು ಭಾರತೀಯ ರೈತರು ಹೇಳಿಕೆ ನೀಡಿದ್ದಾರೆ.
ಬಾಂಗ್ಲಾ ರೈತರ ಈ ಒಳನುಸುಳುವಿಕೆ ಬಗ್ಗೆ ಈ ಮೊದಲೇ ಹಲವು ಬಾರಿ ಭಾರತ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದ್ರೂ ಬಾಂಗ್ಲಾ ಗಡಿ ಭದ್ರತಾ ಯೋಧರು ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಈಗ ಭಾರತ ಬಾಂಗ್ಲಾ ಜೊತೆಗೆ ಧ್ವಜ ಸಭೆ ಕರೆದಿದ್ದು ಬಾಂಗ್ಲಾಗೆ ಸರಿಯಾದ ಎಚ್ಚರಿಕೆ ನೀಡಲು ಮುಂದಾಗಿದೆ.