Advertisement

ಓವರ್‌ ಟೇಕ್‌ ಭರದಲ್ಲಿ ಬೈಕ್‌ ಗಳ ಮುಖಾಮುಖಿ ಢಿಕ್ಕಿ; ಲಾರಿಯಡಿಗೆ ಸಿಕ್ಕಿ ಸವಾರಿಬ್ಬರು ಸಾವು

04:45 PM Jun 06, 2022 | Team Udayavani |

ಮುಂಡರಗಿ (ಗದಗ) : ದ್ವಿಚಕ್ರ ವಾಹನವೊಂದು ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ  ಮತ್ತೊಂದು ಬೈಕ್‌ ಗೆ ಢಿಕ್ಕಿಯಾದ ಪರಿಣಾಮ ಸವಾರಿಬ್ಬರು ಲಾರಿಯಡಿಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಣ್ಣಿಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಮೃತರನ್ನು ದ್ವಿಚಕ್ರ ವಾಹನ ಸವಾರರಾದ ತಾಲೂಕಿನ ಬಸಾಪೂರ ಗ್ರಾಮದ ಫಕೀರಪ್ಪ ಭೀಮಣ್ಣ  ಇದ್ಲಿ (38) ,ಹನುಮಂತ ಪ್ರಕಾಶಪ್ಪ ಇದ್ಲಿ(40) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಬೂದಿಹಾಳ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಅಣ್ಣ-ತಂಗಿಯ ಹತ್ಯೆ: ಹಂತಕರು ಪರಾರಿ

ಇನ್ನೊಂದು ದ್ವಿಚಕ್ರ ವಾಹನದ ಸವಾರರಾದ ಕೋರ್ಲಹಳ್ಳಿ ಗ್ರಾಮದ ದಾವಲಸಾಬ ಖಾಸೀಮಸಾಬ ಹಣಗಿ (26), ಲಾಲಸಾಬ ಮಾಬುಸಾಬ ಹಣಗಿ ಹಂಚಿನಾಳ ತೀವ್ರವಾಗಿ ಗಾಯಗೊಂಡಿದ್ದಾರೆ.

ಸಿಮೆಂಟು ಹೇರಿಕೊಂಡು ಲಾರಿಯು ಕೋರ್ಲಹಳ್ಳಿಯ ಕಡೆಗೆ ತೆರಳುತ್ತಿತ್ತು. ಈ ವೇಳೆ ಲಾರಿಯನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ವೇಗವಾಗಿ ಬರುತ್ತಿದ್ದ ಬೈಕ್‌ ಮತ್ತೊಂದು ಬೈಕ್‌ ಗೆ ಢಿಕ್ಕಿಯಾಗಿದೆ. ಪರಿಣಾಮ ಒಂದು ಬೈಕ್‌ ನ ಸವಾರರು ಲಾರಿಯಡಿಗೆ ಸಿಕ್ಕಿದ್ದಾರೆ. ಪರಿಣಾಮ ಲಾರಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next