Advertisement

ಗಡಿಯಲ್ಲಿ ಪಾಕ್‌ ಯುದ್ಧ ವಿಮಾನಗಳ ಹಾರಾಟ ; ಹೈ ಅಲರ್ಟ್‌

02:59 PM Mar 13, 2019 | Team Udayavani |

ಶ್ರೀನಗರ: ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿರುವ ಬೆನ್ನಲ್ಲೇ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಪೂಂಚ್‌ ಸೆಕ್ಟರ್‌ನಲ್ಲಿ  ಪಾಕ್‌ನ ವಾಯುಪಡೆಯ ಎರಡು ಜೆಟ್‌ಗಳು ಸುತ್ತು ಹಾಕುತ್ತಿರುವುದು ಕಂಡು ಬಂದಿದೆ.

Advertisement

ಗಡಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಾಯುನೆಲೆಗಳಲ್ಲಿ ಸರ್ವ ಸನ್ನದ್ಧ ಸ್ಥಿತಿಯಲ್ಲಿ  ವಿಮಾನಗಳನ್ನು ಇರಿಸಲಾಗಿದ್ದು, ರಡಾರ್‌ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ .

ಮಂಗಳವಾರ ರಾತ್ರಿ ಎಲ್‌ಓಸಿಯಿಂದ 10 ಕಿ.ಮೀ ದೂರದಲ್ಲಿ ಎರಡು ವಿಮಾನಗಳು ಅತೀ ವೇಗವಾಗಿ ಸಂಚರಿಸಿರುವುದು ಸ್ಪಷ್ಟವಾಗಿದೆ.

ಫೆಬ್ರವರಿ 27 ರಂದು ಪಾಕ್‌ ವಿಮಾನಗಳು ಭಾರತದ ಮಿಲಿಟರಿ ನೆಲೆಯನ್ನು ಗುರಿಯಾಗಿರಿಸಿ ದಾಳಿ ಮಾಡಲು ಮುಂದಾಗಿದ್ದವು. ಅವುಗಳನ್ನು ಭಾರತೀಯ ವಾಯುಪಡೆ ವಿಮಾನಗಳು ಬೆನ್ನಟ್ಟಿದ್ದವು. ಆ ಬಳಿಕ ಪಾಕ್‌ ಮತ್ತೆ ದುಸ್ಸಾಹಸಕ್ಕೆ ಕೈಹಾಕಲು ಮುಂದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next