Advertisement

ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ

11:40 PM Apr 30, 2019 | Team Udayavani |

ಹೊನ್ನಾವರ: ಸಾಗರ ಸೀಮೆಯ ನಂತರ ಹತ್ತಿರದ ಸಿದ್ದಾಪುರವನ್ನು ಮಂಗನ ಕಾಯಿಲೆ ಬಾಧಿಸಿದ್ದು, ಬಾಳಗೋಡದ ಹನಮಿ ದೇವು ಹಸ್ಲರ ಏ.24ರಂದು, ಗಣಪತಿ ದೇವು ಹಸ್ಲರ ಏ.28ರಂದು ಚಿಕಿತ್ಸೆ ಫಲಿಸದೆ ಮಣಿಪಾಲದಲ್ಲಿ ಮೃತಪಟ್ಟಿದ್ದಾರೆ.

Advertisement

ಜಿಲ್ಲೆಯಲ್ಲಿ 55 ಜನರಿಗೆ ಮಂಗನ ಕಾಯಿಲೆ ಬಾಧಿ ಸಿತ್ತು. 380 ಮಂಗಗಳು ಸತ್ತಿದ್ದವು. 60 ಮಂಗಗಳ ಶವ ಪರೀಕ್ಷೆ ಮಾಡಲಾಗಿತ್ತು. ಜ್ವರಪೀಡಿತರಾದ ಸಿದ್ದಾಪುರದ 34, ಕಾರವಾರದ 5, ಅಂಕೋಲಾದ 1, ಭಟ್ಕಳ 1, ಹೊನ್ನಾವರದ 14 ಮಂದಿ ಗುಣಮುಖರಾಗಿದ್ದಾರೆ.

602 ರಕ್ತದ ಮಾದರಿಗಳ ಪರೀಕ್ಷೆ ಮಾಡಲಾಗಿತ್ತು. ಗೇರಸೊಪ್ಪಾ, ನವಿಲಗೋಣ, ಸಾಲಕೋಡಗಳಲ್ಲಿ ಮಂಗನ ಕಾಯಿಲೆ ಬಾಧಿ ಸಿದೆ. ಮಳೆ ಆರಂಭವಾಗುವವರೆಗೆ ಈ ತೊಂದರೆ ಮುಂದುವರಿಯುತ್ತದೆ.

ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ ಕಾರಣ ಹೆಚ್ಚಿನ ಸಾವು ಸಂಭವಿಸಿಲ್ಲ. ಪೂರ್ಣಾವ ಧಿ ವೈದ್ಯಾಧಿ ಕಾರಿಯಾಗಿ ಡಾ| ಸತೀಶ ಶೇಟ್‌ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು ಸಕಾಲಿಕ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next