Advertisement

ದುಬೈನಿಂದ ಮಂಗಳೂರು ಮೂಲಕ ಆಗಮಿಸಿದ್ದ ಭಟ್ಕಳದ ಇಬ್ಬರಿಗೆ ಸೋಂಕು ಪತ್ತೆ

12:12 PM Mar 24, 2020 | keerthan |

ಕಾರವಾರ: ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಮತ್ತೆ ಹೆಚ್ಚಾಗಿದೆ. ಇತ್ತೀಚೆಗೆ ವಿದೇಶದಿಂದ ಆಗಮಿಸಿದ್ದ ಜಿಲ್ಲೆಯ ಭಟ್ಕಳದ ಇಬ್ಬರಿಗೆ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ಉತ್ತರ ಕನ್ನಡ  ಜಿಲ್ಲಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಬ್ಬರು ಸೋಂಕಿತ ಬಗ್ಗೆ ಮಾಹಿತಿ ನೀಡಿದರು.

ಮಾರ್ಚ್ 21ಕ್ಕೆ ದುಬೈನಿಂದ ಭಟ್ಕಳಗೆ ಬಂದ 40 ವರ್ಷದ ಹಾಗೂ 65 ವರ್ಷದ ಇಬ್ಬರು ವ್ಯಕ್ತಿಗಳಿಗೆ ಈ ಸೋಂಕು ಇರುವ ಬಗ್ಗೆ ದೃಢಪಟ್ಟಿದೆ. 40 ವರ್ಷದ ವ್ಯಕ್ತಿಯು ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿಂದ ಭಟ್ಕಳಕ್ಕೆ ಬಂದಿದ್ದರು.  ಅಲ್ಲದೆ ಇನ್ನೋರ್ವ 65 ವರ್ಷದ ವ್ಯಕ್ತಿಯು ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿಂದ ರೈಲಿನ ಮೂಲಕ ಭಟ್ಕಳಕ್ಕೆ ತಲುಪಿದ್ದ ಎಂದು ಮಾಹಿತಿ ನೀಡಿದರು.

ಇವರು ದುಬೈನಿಂದ ವಾಪಸ್ಸಾಗಿದ್ದ ದಿನವೇ ಅಂದರೆ ದಿ. 21 ರಂದು ತಾವಾಗಿಯೇ ಮುಂದೆ ಬಂದು ಕೋವಿಡ್-19 ವೈರಾಣು ಪರೀಕ್ಷೆಗಾಗಿ ಆಸ್ಪತ್ರೆಗೆ ಹಾಜರಾಗಿದ್ದರು.  ಇವರನ್ನು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಇವರ ಕಫದ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ವರದಿ ಇಂದು ಬಂದಿದ್ದು, ಇವರಿಗೆ ಕೋವಿಡ್-19 ವೈರಾಣು ಇರುವ ಬಗ್ಗೆ ದೃಢಪಟ್ಟಿದೆ.

Advertisement

ಅಲ್ಲದೆ ವಿದೇಶದಿಂದ ವಾಪಸ್ಸಾಗಿದ್ದ ಇತರ ಜನರಿಗೂ ಕೂಡ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಭಟ್ಕಳ ಉಪ ವಿಭಾಗವನ್ನು ಲಾಕ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಂಕಿತರ ಮನೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಫ್ಯುಮಿಗೇಷನ್ ಮಾಡಲಾಗುವುದು ಈ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇಂದು ಇದುವರೆಗೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 37ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next