ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಬೆಳಗ್ಗೆ ಹೊಸದಾಗಿ ಇಬ್ಬರಲ್ಲಿ ಕೊವಿಡ್-19 ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 520 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪಾದರಾಯಪುರದ ಸಂಪರ್ಕ ಹಿನ್ನೆಲೆ 48 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ಗದಗದಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧನಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಮವಾರ ಸಂಜೆಯಿಂದ ಇದುವರೆಗೆ ಒಟ್ಟು 8 ಪ್ರಕರಣಗಳು ದೃಢವಾಗಿದೆ. ಬೆಂಗಳೂರು, ಗದಗ ಹೊರತುಪಡಿಸಿ ಉಳಿದ ಆರು ಪ್ರಕರಣಗಳು ಕಲಬುರಗಿಯಲ್ಲಿ ದೃಢವಾಗಿದೆ. ಈ ಎಲ್ಲಾ ಆರು ಜನರಿಗೆ ಸೋಂಕಿತ ಸಂಖ್ಯೆ 425ರ ಸಂಪರ್ಕದಿಂದ ಸೋಂಕು ತಾಗಿದೆ.
ರಾಜ್ಯದಲ್ಲಿ ಇದುವರೆಗೆ 520 ಪ್ರಕರಣಗಳು ದೃಢವಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. 198 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.