Advertisement
ಬುಧವಾರ ಬೆಳಗ್ಗೆ ಸ್ಪೀಕರ್ ಕಚೇರಿಗೆ ಆಗಮಿಸಿದ ಹೊಸಕೋಟೆ ಶಾಸಕ , ಸಚಿವ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರು ರಾಜೀನಾಮೆ ನೀಡಿದ್ದಾರೆ.
Related Articles
Advertisement
ಯಾವುದೇ ರಾಜೀನಾಮೆ ಅಂಗೀಕರಿಸಿಲ್ಲಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ನಾನು ಯಾವುದೇ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ರಾತ್ರಿ ಬೆಳಗಾಗುವುದರ ಒಳಗೆ ನಾನಿದನ್ನು ಮಾಡಲಾಗುವುದಿಲ್ಲ. ಜೂನ್ 17 ರ ವರೆಗೆ ಸಮಯಾವಕಾಶ ನೀಡಿದ್ದೇನೆ. ನಿಯಮಾವಳಿಗಳ ಪ್ರಕಾರ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದರು. ಕ್ರಮಬದ್ಧವಾಗಿಲ್ಲದ ನಾಮಪತ್ರಗಳನ್ನು ಮಾತ್ರ ನಾನು ತಿರಸ್ಕರಿಸಿದ್ದೇನೆ ಎಂದರು. ಇಬ್ಬರ ರಾಜೀನಾಮೆಯಿಂದ ಒಟ್ಟು 12 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಮೂವರು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ.