Advertisement
ಈ ಕುರಿತು ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ವಕೀಲರ ಹೆಸರುಗಳನ್ನು ಮರು ಪರಿಶೀಲಿಸಿದ್ದು, ಆದಿತ್ಯ ಸೋಂಧಿ ಹಾಗೂ ನಾಗೇಂದ್ರ ನಾಯಕ್ ಹೆಸರುಗಳನ್ನು ಮತ್ತೂಮ್ಮೆ ಶಿಫಾರಸು ಮಾಡಲಾಗಿದೆ.
Related Articles
Advertisement
ನಾಗೇಂದ್ರ ಆರ್ ನಾಯಕ್ 2021ರ ಮಾರ್ಚ್ 2ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆ ವಕೀಲ ನಾಗೇಂದ್ರ ಆರ್. ನಾಯಕ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸುವಂತೆ ಕೇಂದಕ್ಕೆ ಶಿಫಾರಸು ಮಾಡಿತ್ತು. ಇದಕ್ಕೂ ಮುನ್ನ 2019ರ ಅಕ್ಟೋಬರ್ ನಲ್ಲಿಯೂ ಶಿಫಾರಸು ಮಾಡಲಾಗಿತ್ತು. ರಾಜ್ಯದಲ್ಲಿ ಹಲವು ವರ್ಷಗಳಿಂದ ಸಿಬಿಐ ಪರ ವಕಾಲತ್ತು ವಹಿಸುತ್ತಿರುವ ನಾಗೇಂದ್ರ ಆರ್. ನಾಯಕ್ ಅವರು ಸಿವಿಲ್, ಕ್ರಿಮಿನಲ್, ಭೂವಿವಾದ, ಬ್ಯಾಂಕಿಂಗ್ ಕಾನೂನು ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಭಟ್ಕಳ ಮೂಲದ ನಾಯಕ್ ಬೆಂಗಳೂರು ವಿವಿಯಿಂದ ಕಾನೂನು ಪದವಿ ಪಡೆದಿದ್ದು, 1993ರಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದಿತ್ಯ ಸೋಂಧಿ
ರಾಜ್ಯ ಹೈಕೋರ್ಟ್ ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಆದಿತ್ಯ ಸೋಂಧಿ ಅವರನ್ನು ಮೊದಲಿಗೆ 2021ರ ರ ಮಾರ್ಚ್ 2ರಂದು ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು.ಬೆಂಗಳೂರಿನವರೇ ಆಗಿರುವ ಆದಿತ್ಯ ಸೋಂಧಿ ನಗರದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಶಿಟಿಯಿಂದ ಕಾನೂನು ಪದವಿ ಪಡೆದಿದ್ದಾರೆ. 1998ರಲ್ಲಿ ವಕೀಲರಾಗಿ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಇವರು ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಇವರು ಈ ಹಿಂದೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.