Advertisement

ಪಾಕ್‌ ದಾಳಿಗೆ ಇಬ್ಬರು ಯೋಧರು ಹುತಾತ್ಮ

09:50 AM Jan 03, 2020 | Hari Prasad |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹೊಸ ವರ್ಷದ ದಿನದಂದೇ ಪಾಕ್‌ ಪ್ರೇರಿತ ಉಗ್ರರು ಒಳ ನುಸುಳಲು ಯತ್ನಿಸಿದ್ದಾರೆ. ಈ ಸಂದರ್ಭ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅವರನ್ನು ಸಾವಂತ್‌ ಸಂದೀಪ್‌ ರಘನಾಥ್‌(29) ಅರ್ಜುನ್‌ ಥಾಪ ಮಗರ್‌(25) ಎಂದು ಗುರುತಿ ಸಲಾಗಿದೆ. ನುಸುಳುಕೋರರು ರಜೌರಿ ವ್ಯಾಪ್ತಿಯ ಖಾರಿ ತ್ರಾಯತ್‌ ಅರಣ್ಯ ಪ್ರದೇಶದ ಮೂಲಕ ಒಳ ಪ್ರವೇಶಕ್ಕೆ ಮುಂದಾಗಿದ್ದರು.

Advertisement

ಡಿ. 31ರ ಮಧ್ಯರಾತ್ರಿ ಉಗ್ರರು ಗಡಿಯ ಒಳನ ಸುಳುತ್ತಿರುವ ಕುರಿತು ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ತೆರಳಿದ ಸಶಸ್ತ್ರ ಸೇನೆ ಉಗ್ರರ ಮೇಲೆ ದಾಳಿ ನಡೆಸಿತು. ಇದಕ್ಕೆ ನುಸುಳುಕೋರರೂ ಪ್ರತಿದಾಳಿ ನಡೆಸಿದರು. ಈ ಸಂದರ್ಭ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗಿದೆ, ಅವರು ಕೊನೆಯುಸಿರೆಳೆದರು ಎಂದು ಲೆಫ್ಟಿನಂಟ್‌ ಕರ್ನಲ್‌ ಆನಂದ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next