ವಾಷಿಂಗ್ಟನ್: ಭಾರತೀಯ ಮೂಲದ ಜಡ್ಜ್ ಅರ್ಚನಾ ರಾವ್ ಅವರನ್ನು ನ್ಯೂಯಾರ್ಕ್ ಕ್ರಿಮಿನಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಹಾಗೂ ಜಡ್ಜ್ ದೀಪಾ ಅಂಬೇಕರ್ ಅವರನ್ನು ನ್ಯೂಯಾರ್ಕ್ ಸಿವಿಲ್ ಕೋರ್ಟ್ ಗೆ ಮರು ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇಬ್ಬರು ಭಾರತೀಯ ಮೂಲದ ಮಹಿಳೆಯರನ್ನು ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡೇ ಬ್ಲಾಸಿಯೋ ಕ್ರಿಮಿನಲ್ ಮತ್ತು ಸಿವಿಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಿರುವುದಾಗಿ ವರದಿ ವಿವರಿಸಿದೆ.
ಅರ್ಚನಾ ರಾವ್ ಅವರನ್ನು 2019ರ ಜವರಿಯಲ್ಲಿ ಇಂಟರೀಮ್ ಸಿವಿಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಕ್ರಿಮಿನಲ್ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕವಾಗಿದ್ದು, ಇದಕ್ಕೂ ಮೊದಲು ನ್ಯೂಯಾರ್ಕ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ 17 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.
ನ್ಯೂಯಾರ್ಕ್ ನ ವಸ್ಸಾರ್ ಕಾಲೇಜಿನಲ್ಲಿ ಅರ್ಚನಾ ರಾವ್ ಪದವಿ ಪಡೆದಿದ್ದು, ಫೋರ್ಧಂ ಯೂನಿರ್ವಸಿಟಿ ಸ್ಕೂಲ್ ಆಫ್ ಲಾನಲ್ಲಿ ಜ್ಯೂರಿಸ್ ಡಾಕ್ಟರೇಟ್ ಪಡೆದಿದ್ದರು ಎಂದು ವರದಿ ತಿಳಿಸಿದೆ.
Related Articles
ಅಂಬೇಕರ್ ಕೂಡಾ ಕಾನೂನು ಸಲಹಾ ಸೊಸೈಟಿಯಯಲ್ಲಿ ಅಟಾರ್ನಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಅಂಬೇಕರ್ ಮಿಚಿಗನ್ ಯೂನಿರ್ವಸಿಟಿಯಲ್ಲಿ ಪದವಿ ಹಾಗೂ ರುಟ್ ಗೇರ್ಸ್ ಲಾ ಕಾಲೇಜಿನಲ್ಲಿ ಜ್ಯೂರಿಸ್ ಡಾಕ್ಟರೇಟ್ ಪದವಿ ಪಡೆದಿದ್ದರು.