ಮುಂಬೈ: ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಮಂಡಳಿಗಳ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ತಯಾರಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ದಾಖಲೆಗಳಿಗಾಗಿ ಈ ಆರೋಪಿಗಳು 2,000-15000 ರೂ.ಗಳ ಶುಲ್ಕವನ್ನು ಪಡೆಯುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಪರಾಧ ಶಾಖೆಯ ಎರಡನೇ ಘಟಕದ ಪೊಲೀಸರು ಆರೋಪಿಗಳ ಬಳಿ ನಕಲಿ ಗ್ರಾಹಕರನ್ನು ಕಳುಹಿಸುವ ಮೂಲಕ ಈ ದಂಧೆಯನ್ನು ಬಯಲಿಗೆಳೆಯಲಾಗಿದೆ ಎಂದವರು ತಿಳಿಸಿದ್ದಾರೆ.
ಆರೋಪಿ ಮುನಾವರ್ ಅಹ್ಮದ್ ಸಯೀದ್ (34) ಮತ್ತು ಹಸ್ಮುದ್ದೀನ್ ಖೈರುದ್ದೀನ್ ಶಾನನ್ನು (33) ಗುರುವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ ನಿಂದ ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಬಂಧಿತರ ವಿರುದ್ಧ ವಂಚನೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಮತ್ತು ಸೋಮವಾರದವರೆಗೆ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.