Advertisement

GTTC: ಜಿಲ್ಲೆಗೆ ಎರಡು ಜಿಟಿಟಿಸಿ ಕೇಂದ್ರಕ್ಕೆ ಚಿಂತನೆ

09:46 PM Dec 14, 2023 | Team Udayavani |

ಬೆಳಗಾವಿ: ಪ್ರತಿ ಜಿಲ್ಲೆಗೆ ಒಂದರಂತೆ ಜಿಟಿಟಿಸಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಗೆ ಎರಡು ಜಿಟಿಟಿಸಿ ಕೇಂದ್ರ ಆರಂಭಿಸುವ ಚಿಂತನೆ ಇದ್ದು, ಆರ್ಥಿಕ ಇಲಾಖೆ ಅನುಮೋದನೆ ನೀಡಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಹೇಳಿದರು.

Advertisement

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎನ್‌.ಟಿ. ಶ್ರೀನಿವಾಸ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಜಿಟಿಟಿಸಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶಾಸಕರು ಬಳ್ಳಾರಿ ಜಿಲ್ಲೆಯ ಕೂಡ್ಲಗಿಯಲ್ಲಿ ಜಿಟಿಟಿಸಿ ಕೇಂದ್ರ ಆರಂಭಕ್ಕೆ ಕೇಳಿದ್ದು, ಈಗಾಗಲೇ ಬಳ್ಳಾರಿಯಲ್ಲಿ ಜಿಟಿಟಿಸಿ ಇರುವುದರಿಂದ ಮತ್ತೂಂದು ಕೇಂದ್ರ ಆರಂಭ ಸಾಧ್ಯವಿಲ್ಲ. ಆರ್ಥಿಕ ಇಲಾಖೆ ಜಿಲ್ಲೆಗೆ ಎರಡು ಜಿಟಿಟಿಸಿ ಕೇಂದ್ರ ಆರಂಭಕ್ಕೆ ಒಪ್ಪಿಗೆ ನೀಡಿದರೆ ಆಗ ಕೂಡ್ಲಗಿಯಲ್ಲಿ ಕೇಂದ್ರ ಪ್ರಾರಂಭಿಸಲು ಪರಿಗಣಿಸಲಾಗುವುದು ಎಂದರು.

ಕೂಡ್ಲಗಿಯಲ್ಲಿ ಎರಡು ಸರಕಾರಿ ಹಾಗೂ ನಾಲ್ಕು ಖಾಸಗಿ ಐಟಿಐ ಸಂಸ್ಥೆಗಳು ಇದ್ದು, ಅಲ್ಲಿ ಮತ್ತೂಂದು ಸರಕಾರಿ ಐಟಿಐ ಸಂಸ್ಥೆ ಆರಂಭ ಚಿಂತನೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next