Advertisement

ಕ್ಷುದ್ರಗ್ರಹ ಪತ್ತೆ ಹಚ್ಚಿದ ವಿದ್ಯಾರ್ಥಿನಿಯರು!

12:16 PM Jul 29, 2020 | mahesh |

ಹೊಸದಿಲ್ಲಿ: ಕೆಲವೇ ದಿನಗಳಲ್ಲಿ ಭೂಮಿಯ ಸಮೀಪದಿಂದ ಹಾದು ಹೋಗಲಿರುವ ಕ್ಷುದ್ರ ಗ್ರಹವೊಂದನ್ನು ಸೂರತ್‌ನ ಇಬ್ಬರು ಶಾಲಾ ಬಾಲಕಿಯರು ಪತ್ತೆ ಹಚ್ಚಿದ್ದಾರೆ. ಅದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಕೂಡ ಪ್ರಮಾಣೀಕರಿಸಿದೆ. ಇದರಿಂದಾಗಿ ತಮ್ಮ ಆಕಸ್ಮಿಕ ಸಂಶೋಧನೆಗೆ ವಿಶ್ವಮಾನ್ಯತೆ ಸಿಕ್ಕಿರುವ ಆನಂದದಲ್ಲಿ ವೈದೇಹಿ ವೆಕಾರಿಯಾ ಸಂಜಯ್‌ಭಾಯ್‌ ಹಾಗೂ ರಾಧಿಕಾ ಲಖಾನಿ ಪ್ರಫ‌ುಲ್ಲಭಾಯಿ ಇದ್ದಾರೆ.

Advertisement

ಅವರು ಸೂರತ್‌ನ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗಾಗಿ 2 ತಿಂಗಳ ವಿಜ್ಞಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದ “ಸ್ಪೇಸ್‌ ಇಂಡಿಯಾ’, ಟೆಕ್ಸಾಸ್‌ನ ಹಾರ್ಡಿನ್‌ ಸೈಮನ್ಸ್‌ ವಿವಿ, ಅಂತಾರಾಷ್ಟ್ರೀಯ ಆ್ಯಸ್ಟ್ರೋನ ಮಿಕಲ್‌ ಸರ್ಚ್‌ ಕೊಲಾಬರೇಷನ್‌ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹವಾಯ್‌ನಲ್ಲಿರುವ ಪ್ಯಾನ್‌ ಸ್ಟಾರ್ಸ್‌ ಎಂಬ ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸುವುದನ್ನು ಹೇಳಿಕೊಡಲಾಗುತ್ತಿತ್ತು. ಕಲಿಕೆಯಲ್ಲಿ ನಿರತರಾಗಿದ್ದ ವೈದೇಹಿ ಹಾಗೂ ರಾಧಿಕಾ, ಗ್ರಹವೊಂದು ಚಲಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next