ಸುಳ್ಯ : ಅವಕಾಶಗಳು ನಮ್ಮನ್ನು ಅರಸಿ ಬರುವುದಿಲ್ಲ, ನಾವೇ ಅವಕಾಶಗಳ ಬಾಗಿಲು ತಟ್ಟಬೇಕು. ಓದಿನ ಜತೆಗೆ ಮನಸ್ಸಿನ ಭಾವನೆಗಳನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ಹೊರಹಾಕುವ ಪ್ರಯತ್ನ ಮಾಡಿ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖವಿದ್ದ ಹಾಗೆ ಎಂದು ಮೈಸೂರು ರಂಗಾಯಣದ ಪ್ರಸಿದ್ಧ ಕಲಾವಿದೆ ಗೀತಾ ಮೋಂಟಡ್ಕ ಅವರು ಹೇಳಿದರು.
ಅವರು ಸುಳ್ಯದ ನೆಹರೂ ಮೆಮೋ ರಿಯಲ್ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ಚಟುವಟಿಕೆಗಳ ಕುರಿತ ಮಾಹಿತಿ ಕಾರ್ಯಕ್ರಮ ಸಾಂಸ್ಕೃತಿಕ ಸಂವಹನವನ್ನು ಉದ್ಘಾಟಿಸಿ ಮಾತನಾಡಿದರು.
ಗುರಿ, ಧೈರ್ಯ, ಪ್ರಯತ್ನ, ಆತ್ಮವಿಶ್ವಾಸ ನಮ್ಮಲ್ಲಿದ್ದಾಗ ನಾವು ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಗಿರಿಧರ ಗೌಡ ಕೆ. ಅವರು ಮಾತನಾಡಿ, ಪಠ್ಯೇತರ ಚಟುವಟಿಕೆಗಳಿಗೆ ಇಂದಿನ ದಿನಗಳಲ್ಲಿ ಬೇಕಾದಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಂಡು ಓರ್ವ ಪ್ರತಿಭಾನ್ವಿತ ವಿದ್ಯಾ ರ್ಥಿಯಾಗಿ ಹೊರಬಂದಾಗ ಸಮಾಜ ನಿಮ್ಮನ್ನು ಗುರುತಿಸುತ್ತದೆ ಎಂದರು.
ಸಾಂಸ್ಕೃತಿಕ ಸಂಘದ ಸಂಚಾಲಕಿ ಡಾ| ಅನುರಾಧಾ ಕುರುಂಜಿ ಪ್ರಾಸ್ತಾ ವಿಕವಾಗಿ ಮಾತನಾಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿ ಜೀವನ ಪರಿಪೂರ್ಣ ಎಂದರು.
ಸೌಜನ್ಯಾ ರೈ, ದೇವಿಕಾ ವೈ, ಅಮೃತ ಪ್ರಾರ್ಥಿಸಿ, ಕಾಲೇಜಿನ ಸಾಂಸ್ಕೃತಿಕ ಸಂಘದ ಪ್ರತಿನಿಧಿ ವಿರಾಟ್ ಕೆ .ಆರ್. ಸ್ವಾಗತಿಸಿ, ರೇಷ್ಮಾ ಕೆ. ವಂದಿಸಿದರು. ಸುಶ್ಮಿತಾ ಕೆ. ವೈ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಸಂಘದ ಸದಸ್ಯರಾದ ಕೃಪಾ ಎ.ಎನ್., ಪ್ರಣೀತಾ ಬಿ. ಪಿ., ವಿಷ್ಣುಪ್ರಶಾಂತ್ ಬಿ., ಶೋಭಾ ಎ., ನಿವೇದಿತಾ ಬಿ. ವಿ., ಪ್ರಜ್ಞಾ ಪಿ. ಕೆ., ಮಾನಸಾ ಭಾರದ್ವಾಜ್ ಉಪಸ್ಥಿತರಿದ್ದರು.