Advertisement

ಉಗ್ರರಿಂದ ಗ್ರೆನೇಡ್‌ ದಾಳಿ: ಇಬ್ಬರು ಯೋಧರಿಗೆ ಗಾಯ

11:45 AM Jun 29, 2018 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಗಸ್ತು ನಿರತ ಭದ್ರತಾ ಪಡೆಯ ತಂಡದ ಮೇಲೆ ಉಗ್ರರು ಗ್ರೆನೇಡ್‌ ಎಸೆದ ಪರಿಣಾಮವಾಗಿ ಇಬ್ಬರು ಯೋಧರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಆಘಾಮ್‌ ಎಂಬಲ್ಲಿ  ಸೇನಾ ಗಸ್ತು ತಂಡದ ಮೇಲೆ ಉಗ್ರರು ಎಸೆದ ಗ್ರೆನೇಡ್‌ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಗಾಯಗೊಂಡರು. 

ಒಡನೆಯೇ ಆಸ್ಪತ್ರೆಗೆ ಸೇರಿಸಲಾಗಿರುವ ಅವರ ದೇಹ ಸ್ಥಿತಿ ಸ್ಥಿರವಾಗಿದೆ; ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next