Advertisement

ಆತ್ಮಾಹುತಿ ಬಾಂಬ್‌ ದಾಳಿ: ಇಬ್ಬರು ಅಲ್ಜೀರ್‌ ಪೊಲೀಸರು ಬಲಿ

04:18 PM Aug 31, 2017 | Team Udayavani |

ಅಲ್‌ಜೀರ್‌ಸ್‌ : ಭಯೋತ್ಪಾದಕ ಆತ್ಮಾಹುತಿ ಬಾಂಬರ್‌ನ ದಾಳಿಗೆ ಇಬ್ಬರು ಅಲ್ಜೀರಿಯನ್‌ ಪೊಲೀಸರು ಮೃತಪಟ್ಟಿರುವ ಘಟನೆ ವರದಿಯಾಗದೆ.

Advertisement

ಆತ್ಮಾಹುತಿ ಬಾಂಬರ್‌ನ ಮೇಲೆ ಪೊಲೀಸ್‌ ಸಿಬಂದಿಯೊಬ್ಬ ಎರಗಿದಾಗ ಆ ಬಾಂಬರ್‌ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ ಸ್ಫೋಟಕ ಸ್ಫೋಟಗೊಂಡಿತು. 

ರಾಜಧಾನಿ ಅಲ್‌ಜೀರ್‌ಸ್‌ ನಿಂದ  ಸುಮಾರು 350 ಕಿ.ಮೀ. ನೈಋತ್ಯದಲ್ಲಿರುವ ತಿಯಾರತ್‌ ನಲ್ಲಿನ ಪೊಲೀಸ್‌ ಪ್ರಧಾನ ಕಾರ್ಯಾಲಯದ ಮೇಲೆ ದಾಳಿ ನಡೆಸುವುದು ಬಾಂಬರ್‌ನ ಉದ್ದೇಶವಾಗಿತ್ತು. ಆತನನ್ನು ಪ್ರವೇಶ ದ್ವಾರದಲ್ಲೇ ಪೊಲೀಸರಿಬ್ಬರು ತಡೆದರು. ಆಗಲೇ ಆತನನ್ನು ನಿಯಂತ್ರಿಸಲು ಒಬ್ಬ ಪೊಲೀಸ್‌ ಆತನ ಮೇಲೆರಗಿದ. ಪರಿಣಾಮವಾಗಿ ಸ್ಫೋಟ ಉಂಟಾಗಿ ಬಾಂಬರ್‌ ಮಾತ್ರವಲ್ಲದೆ ಇಬ್ಬರು ಪೊಲೀಸರೂ ಬಲಿಯಾದರು. 

Advertisement

Udayavani is now on Telegram. Click here to join our channel and stay updated with the latest news.

Next