Advertisement

Twitter (X): ಮೋದಿ ಬಳಿಕ ಯೋಗಿ ಪಾಪ್ಯುಲರ್‌

08:16 PM Sep 05, 2023 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಭಾರತದಲ್ಲಿ ನೆಟ್ಟಿಗರು ಅತಿ ಹೆಚ್ಚು ಫಾಲೋ ಮಾಡಿರುವ ರಾಜಕಾರಣಿ ಎಂದರೆ, ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಹೀಗೆಂದು ಟ್ವಿಟರ್‌ ತಿಳಿಸಿದೆ.

Advertisement

ಇತ್ತೀಚೆಗಷ್ಟೇ ಜಗತ್ತಿನ ಪ್ರಭಾವಿ ವ್ಯಕ್ತಿಗಳಿಗೆ ಎಷ್ಟು ಮಂದಿ ಫಾಲೋರ್ಸ್‌ಗಳು ಹೆಚ್ಚಾಗಿದ್ದಾರೆ ಎಂಬ ಬಗ್ಗೆ ಒಂದು ತಿಂಗಳ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪ್ರಕಾರ 30 ದಿನಗಳಲ್ಲಿ 6.32 ಲಕ್ಷ ಹೊಸ ಫಾಲೋವರ್ಸ್‌ಗಳನ್ನು ಹೊಂದಿರುವ ಅಗ್ರ ರಾಜಕಾರಣಿಯ ಸ್ಥಾನದಲ್ಲಿ ಪ್ರಧಾನಿ ಮೋದಿ ಇದ್ದಾರೆ. ಮೋದಿ ಅವರ ಒಟ್ಟು ಟ್ವಿಟರ್‌ ಫಾಲೋವರ್ಸ್‌ ಸಂಖ್ಯೆ 2.6 ಕೋಟಿಗೆ ಏರಿಕೆಯಾಗಿದೆ. 2ನೇ ಸ್ಥಾನದಲ್ಲಿ ಯುಪಿ ಸಿಎಂ ಯೋಗಿ ಅವರಿದ್ದಾರೆ. 30 ದಿನದಲ್ಲಿ ಅವರ ಫಾಲೋವರ್ಸ್‌ ಸಂಖ್ಯೆ 2.67 ಲಕ್ಷದಷ್ಟು ಹೆಚ್ಚಾಗಿದೆ. ಇಸ್ರೋಗೆ 11, 66,140, ಕ್ರಿಕೆಟಿಗ ವಿರಾಟ್‌ ಕೋಹ್ಲಿಗೆ ಹೊಸತಾಗಿ 4, 74, 011 ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next