ನವದೆಹಲಿ/ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟರ್‌ನ ಹೊಸ ಮಾಲೀಕ ಎಲಾನ್ ಮಸ್ಕ್ ಅವರು ಮೊದಲ ಹಂತದಲ್ಲಿ ಕಂಪನಿಯಿಂದ ಶೇ.25ರಷ್ಟು ಅಂದರೆ 2 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದ್ದಾರೆ.
ಸದ್ಯ ಕಂಪನಿಯಲ್ಲಿ ಒಟ್ಟು 7 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಭಾರತ ಮೂಲದ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ವಜಾ ಮಾಡಿರುವಂತೆಯೇ ಹೊಸ ನಿರ್ಧಾರ ಪ್ರಕಟವಾಗಿದೆ.
ಮತ್ತೊಂದೆಡೆ, ಟ್ವಿಟರ್‌ನಲ್ಲಿ ಬ್ಲೂಟಿಕ್ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 1,600 ರೂ. ಶುಲ್ಕ ವಿಧಿಸಲು ಮಾಲೀಕ ಎಲಾನ್ ಮಸ್ಕ್ ನಿರ್ಧಿರಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮೂಲಕ ಬ್ಲೂ ಟಿಕ್ ವ್ಯವಸ್ಥೆ ಹೊಂದಲು ಸಾಧ್ಯ ಎಂಬ ನಿಲುವನ್ನು ಜಾರಿಗೊಳಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಪಾವತಿಯ ವ್ಯವಸ್ಥೆ ಇದ್ದು, ಅದು ಐಚ್ಛಿಕವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ “ಈ ರೀತಿ ಮಾಡಲು ಸಾಧ್ಯವಿಲ್ಲ. ಇದೊಂದು ತಪ್ಪು ಮಾಹಿತಿ ಇರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.