ನವದೆಹಲಿ: ಸಾಮಾಜಿಕ ಜಾಲತಾಣಗಳ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿರುವ ನಡುವೆಯೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಬ್ಯಾಡ್ಜ್ ಮಾರ್ಕ್ ಅನ್ನು ಟ್ವಿಟರ್ ಸಂಸ್ಥೆ ಶನಿವಾರ(ಜೂನ್ 05) ತೆಗೆದುಹಾಕಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉತ್ತರ ಕನ್ನಡ ಜಿ.ಪಂ ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ;ಕೆ- ಸ್ವಾನ್ ಕೊಠಡಿ ದಾಖಲೆ ಆಗ್ನಿಗಾಹುತಿ
ಉಪರಾಷ್ಟ್ರಪತಿ ಕಚೇರಿ ನಿರ್ವಹಿಸುವ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ “ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ@ವಿಪಿ ಸೆಕ್ರೆಟರಿಯೇಟ್ 9.3 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದು, ಇದರ ಬ್ಲೂ ಟಿಕ್ ಈಗಲೂ ಉಳಿಸಿಕೊಂಡಿದೆ. ನಾಯ್ಡು ಅವರ ವೈಯಕ್ತಿಕ ಖಾತೆ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.
ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ ಕಳೆದ ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಬ್ಲೂ ಬ್ಯಾಡ್ಜ್ ಮಾರ್ಕ್ ಅನ್ನು ಟ್ವಿಟರ್ ತೆಗೆದು ಹಾಕಿರುವುದಾಗಿ ಉಪರಾಷ್ಟ್ರಪತಿ ಕಚೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಅನ್ನು ತೆಗೆದುಹಾಕಿದ ಬಗ್ಗೆ ಆಕ್ಷೇಪ ಎತ್ತಿದ ನಂತರ ನಾಯ್ಡು ಅವರ ಖಾತೆಯಲ್ಲಿನ ಬ್ಲೂ ಬ್ಯಾಡ್ಜ್ ಮತ್ತೆ ಕಾಣಿಸಿಕೊಂಡಿರುವುದಾಗಿ ನಾಯ್ದು ಅವರ ಕಚೇರಿ ತಿಳಿಸಿದೆ.