ಹೊಸದಿಲ್ಲಿ: ಗುರುವಾರ ಬೆಳಗ್ಗೆ ಎದ್ದು ಟ್ವಿಟ್ಟರ್ ನೋಡಿದವರಿಗೆ ಆಘಾತ ಕಾದಿತ್ತು. ಯಾಕೆಂದರೆ ಟ್ವಟ್ಟರ್ ಖಾತೆ ತನ್ನಷ್ಟಕೆ ಲಾಗೌಟ್ ಆಗಿತ್ತು. ಅಲ್ಲದೆ ‘Something went wrong, but don’t fret — it’s not your fault. Let’s try again ಎಂಬ ಸಂದೇಶವೂ ಇತ್ತು. ಹೌದು ಗುರುವಾರ ಬೆಳಗ್ಗೆ ಸಾವಿರಾರು ಮಂದಿ ಬಳಕೆದಾರರು ಪರದಾಡಿದರು.
ಆದಾಗ್ಯೂ, ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್ ಸ್ಥಗಿತಗೊಂಡಿರುವುದು ಇದು ಮೂರನೇ ಬಾರಿ.
ಡೌನ್ ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ ದೆಹಲಿ, ನಾಗ್ಪುರ, ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಹಲವಾರು ನಗರಗಳಲ್ಲಿ ಟ್ವಿಟ್ಟರ್ ಡೌನ್ ಆಗಿದೆ. ಹಲವು ಬಾರಿ ರಿಫ್ರೆಶ್ ಮಾಡಿದರೂ ಬಳಕೆದಾರರಿಗೆ ಲಾಗ್-ಇನ್ ಮಾಡಲು ಅಥವಾ ಲಾಗ್‌ಔಟ್ ಮಾಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಭಾರತದಲ್ಲಿ ಬಹುನಿರೀಕ್ಷಿತ ಟೊಯೊಟಾ ಇನ್ನೊವಾ ಹೈಕ್ರಾಸ್ ಬೆಲೆ ರಿಲೀಸ್
ವೆಬ್‌ಸೈಟ್‌ಗೆ ಪ್ರಕಾರ, ಜಗತ್ತಿನಾದ್ಯಂತ ಬಳಕೆದಾರರು ಬೆಳಿಗ್ಗೆ 6 ಗಂಟೆಯ ನಂತರ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್ ಸೇರಿದಂತೆ ಇತರ ದೇಶಗಳ ಬಳಕೆದಾರರು ಕೂಡಾ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ವರದಿ ಮಾಡಿದೆ.