Advertisement

ನೆರೆ ಪರಿಹಾರ ತಾರತಮ್ಯ : ಕೇಂದ್ರ –ರಾಜ್ಯ ಸರಕಾರದ ವಿರುದ್ಧ ಟ್ವೀಟಾಂದೋಲನ

10:29 AM Oct 14, 2019 | Hari Prasad |

ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ತಿಂಗಳೆರಡು ಕಳೆದರೂ ಕೇಂದ್ರ ಸರಕಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರದ ರೂಪದಲ್ಲಿ 1,544.26 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿದ್ದು, ಇದು ಕೆಲವೇ ಜಿಲ್ಲೆಗಳಿಗೆ ಹಂಚುವಲ್ಲಿ ಮುಗಿದು ಹೋಗಲಿದೆ. ಕೇಂದ್ರ ಈ ನಡೆಯ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಕೇಂದ್ರ ಸರಕಾರ ಈ ಧೋರಣೆಗೆ ರವಿವಾರ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

#1LakhcrorePackage2Karnataka ಹ್ಯಾಶ್‌ಟ್ಯಾಗ್‌ ಮೂಲಕ ಟ್ವೀಟಿಗರು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ಪ್ರತಿವರ್ಷ 1 ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತದೆ. ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಇಷ್ಟೆಲ್ಲಾ ತೆರಿಗೆಯನ್ನು ರಾಜ್ಯದಿಂದ ಸಂಗ್ರಹಿಸುವ ಕೇಂದ್ರ ಸರಕಾರ ನೆರೆ ಪರಿಹಾರದ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದೆ ಎಂಬ ಆಕ್ರೋಶಗಳು ಕೇಳಿ ಬಂದಿವೆ.
ನೆರೆ ಮತ್ತು ಬರದಂತಹ ಕಷ್ಟದ ಕಾಲದಲ್ಲಿ ಕರ್ನಾಟಕಕ್ಕೆ ನೆರವು ನೀಡುವುದು ಒಕ್ಕೂಟ ಸರ್ಕಾರದ ಜವಾಬ್ದಾರಿಯಲ್ಲವೇ? ಈ ರೀತಿಯ ಕಷ್ಟ ಸುಖಕ್ಕೆ ಸ್ಪಂದಿಸದೇ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯವೇ?#1LakhcrorePackage2Karnataka #ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ pic.twitter.com/UNDETECpD4


ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಹಮ್ಮಿಕೊಂಡ ಈ ಅಭಿಯಾದಲ್ಲಿ 2 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ದಾಖಲಾಗಿವೆ. ಅತೀ ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ಟ್ವೀಟುಗಳು ಹರಿದು ಬಂದವು. ಜನರು ತಮ್ಮ ಟ್ವೀಟ್‌ನ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ತೆರಿಗೆ ಪಾವತಿಸಲು, ಅಧಿಕಾರಕ್ಕೆ ಬರಲು ಮಾತ್ರ ಕರ್ನಾಟಕ ಬೇಕು. ರಾಜ್ಯದ ಜನರ ವಿಚಾರ ಬಂದಾಗ ನೀವು ಸುಮ್ಮನಾಗಿ ಬಿಡುತ್ತೀರಿ ಎಂದು ರಾಜಕೀಯ ಪಕ್ಷಗಳನ್ನು ಟೀಕಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next