Advertisement

ಟಿವಿ, ಫ್ರಿಡ್ಜ್, ವಾಷಿಂಗ್‌ ಮೆಷಿನ್‌ ಬೆಲೆ ಏರಿಕೆ

09:14 PM Jan 09, 2022 | Team Udayavani |

ನವದೆಹಲಿ: ಜನಜೀವನದ ಮೇಲೆ ಒಂದತ್ತ ಕೊರೊನಾ ಬರೆ ಇಡುತ್ತಿದ್ದರೆ, ಇನ್ನೊಂದತ್ತ ಬೆಲೆ ಏರಿಕೆ ಬರೆ ಇಡಲಾರಂಭಿಸಿದೆ.

Advertisement

ಆರ್ಥಿಕ ವರ್ಷದ ಇದೇ ತ್ತೈಮಾಸಿಕದಲ್ಲಿ ಟಿವಿ, ಫ್ರಿಡ್ಜ್ ಸೇರಿ ಎಲ್ಲ ರೀತಿಯ ಗೃಹೋಪಯೋಗಿ ಉತ್ಪನ್ನಗಳ ಬೆಲೆ ಶೇ. 5-10ರವರೆಗೆ ಏರಿಕೆಯಾಗಲಿದೆ.

ಕಚ್ಚಾ ಉತ್ಪನ್ನಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗುತ್ತಿರುವುದಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಉಪಕರಣಗಳ ತಯಾರಕರ ಸಂಘ(ಸಿಇಎಎಂಎ) ತಿಳಿಸಿದೆ.

ಕಳೆದ ಡಿಸೆಂಬರ್‌ನಿಂದಲೇ ಬೆಲೆ ಏರಿಕೆ ಆರಂಭವಾಗಿದ್ದು, ಈ ಏಪ್ರಿಲ್‌ವರೆಗೂ ಹಂತ ಹಂತವಾಗಿ ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ

Advertisement

ಹೈಯರ್‌ ಅಪ್ಲೈ ಯೆನ್ಸೆಸ್‌ ಸಂಸ್ಥೆ ಶೇ.3-5 ಬೆಲೆ ಏರಿಸುವುದಾಗಿ ತಿಳಿಸಿದೆ. ಪ್ಯಾನಾಸೋನಿಕ್‌ ಸಂಸ್ಥೆ ಎಸಿಗಳ ಬೆಲೆಯನ್ನು ಈಗಾಗಲೇ ಶೇ. 8 ಏರಿಕೆ ಮಾಡಿದ್ದು, ಇನ್ನೂ ಏರಿಸುವ ಚಿಂತನೆ ನಡೆಸುತ್ತಿರುವುದಾಗಿ ಹೇಳಿದೆ. ಹಾಗೆಯೇ ಎಲ್‌ಜಿ, ಸೋನಿ, ಹಿಟಾಚಿ, ಗೋದ್ರೆಜ್‌ ಸಂಸ್ಥೆಗಳು ಬೆಲೆ ಏರಿಸುವುದಾಗಿ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next