ಬೆಂಗಳೂರು: ಪ್ರತಿಷ್ಠಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ಮೋಟರ್ ಇತೀ¤ಚೆಗೆ ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿ ಮಾರ್ಕ್ಯೂ (ವಾಹನಗಳು ಮತ್ತು ಸಲಕರಣೆಗಳ) ಶೋರೂಂ ತೆರೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ನೂತನ ವಿತರಕರಾಗಿ ನೇಮಕಗೊಂಡಿರುವ ಅಲ್ ಯೂಸುಫ್ ಎಂಸಿ ಸಂಸ್ಥೆ ಸಹಯೋಗದಲ್ಲಿ ಟಿವಿಎಸ್ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಿದೆ. ಅಲ್ಲದೆ, ಸ್ಪೇರ್ ಪಾರ್ಟ್ಸ್ (ಬಿಡಿ ಭಾಗಗಳು) ಮತ್ತು ವಾಹನ ಸರ್ವೀಸ್ ಸೌಲಭ್ಯವನ್ನು ಇಲ್ಲಿ ಕಲ್ಪಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿ ಅಂತಾರಾಷ್ಟ್ರೀಯ ವಹಿವಾಟು ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ದಿಲೀಪ್, ಸಂಯುಕ್ತ ಅರಬ್ ಸಂಸ್ಥಾನದ ಅಲ್ ಯೂಸುಫ್ ಎಂಸಿ ಜೊತೆಗೂಡಿ ದುಬೈ ನಗರದಲ್ಲಿ ನಮ್ಮ ವಹಿವಾಟು ವಿಸ್ತರಿಸುತ್ತಿರುವುದು ಸಂತಸ ತಂದಿದೆ. ಅಲ್ ಯೂಸುಫ್ ಎಂಸಿ ಸಂಸ್ಥೆಗಿರುವ ಅಪಾರ ಅನುಭವವನ್ನು ಬಳಸಿಕೊಂಡು ಈ ಭಾಗದ ಗ್ರಾಹಕರಿಗೆ ಕೊಡುಗೆಗಳನ್ನು ಮತ್ತು ಸೇವೆ ನೀಡಲು ಇದೊಂದು ಉತ್ತಮ ವೇದಿಕೆಯಾಗಿದೆ.
ದುಬೈನ 2700 ಚ.ಮೀ. ವಿಸ್ತೀರ್ಣದ ಬೃಹತ್ ಮಾರ್ಕ್ಯೂ ಶೋರೂಂನಲ್ಲಿ ನಮ್ಮ ಎಲ್ಲ ಉತ್ಪನ್ನಗಳನ್ನು ಪ್ರದರ್ಶನ, ಮಾರಾಟಕ್ಕಿಡಲಾಗಿದೆ. ಇದರಿಂದ ಈ ಭಾಗದ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ ಹಾಗೂ ಯುಎಇ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪರಿಣಾಮಬೀರಲಿದೆ ಎಂದರು. ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅಲ್ ಯೂಸುಫ್ ಎಲ್‌ಎಲ್‌ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಹಮದ್ ಅಲ್ ಯೂಸುಫ್, ಟಿವಿಎಸ್ ಮೋಟರ್ ವಾಹನಗಳನ್ನು ನಮ್ಮ ಸಂಸ್ಥೆ ಮೂಲಕ ಪರಿಚಯಿಸುವ ಜತೆಗೆ, ಕಂಪನಿ ಪ್ರತಿನಿಧಿಯಾಗಿ ಯುಎಇಯಲ್ಲಿ ದ್ವಿಚಕ್ರ ವಾಹನಗಳನ್ನು ಪೂರೈಸುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ.
ವಿತರಕರಾಗಿ ಸೂಪರ್ ಪ್ರೀಮಿಯಂ ವಿಭಾಗದಲ್ಲಿ ಟಿವಿಎಸ್ ಅಪಾಚೆ ಆರ್‌ಆರ್ 310, ಪ್ರೀಮಿಯಂ ವಿಭಾಗದ ಆಪಾಚೆ ಆರ್‌ಟಿಆರ್ 200 4ವಿ, 160 4ವಿ ಮತ್ತು 180 ರೇಸ್ ಎಡಿಷನ್; ಸ್ಕೂಟರ್ ಮಾಡೆಲ್‌ಗಳಲ್ಲಿ ಸ್ಮಾರ್ಟ್ ಸ್ಕೂಟರ್, ಟಿವಿಎಸ್ ಎನ್‌ಟಿಐಆರ್‌ಕ್ಯೂ 125, ಜ್ಯುಪಿಟರ್ ಮತ್ತು ಟಿವಿಎಸ್ ವೇಗೊ ಹಾಗೂ ಪ್ರಯಾಣಿಕರ ವಿಭಾಗದ ಟಿವಿಎಸ್ ಎಚ್‌ಎಲ್‌ಎಕ್ಸ್ 150 ಮತ್ತು ಎಚ್‌ಎಲ್‌ಎಸ್ 125 ಅನ್ನು ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.