Advertisement
ಪಿಒಪಿ ಹಾಗೂ ಬಣ್ಣದ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯಿಂದ ಪರಿಸರ ನಾಶವಾಗುತ್ತದೆ. ಅದಕ್ಕಾಗಿಯೇ ಪರಿಸರಸ್ನೇಹಿ ಗಣೇಶನ ಮೂರ್ತಿ ನಿರ್ಮಿಸಿ ಆರಾಧನೆಗೆ ಇತ್ತೀಚಿನ ದಿನಗಳಲ್ಲಿ ಒತ್ತು ನೀಡಲಾಗುತ್ತದೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧವಿದೆ. ಹೀಗಾಗಿ ಮನೆಮನೆಗಳಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವುಳ್ಳ ಅರಶಿನ, ಸೆಗಣಿಯನ್ನು ಬಳಸಿಕೊಂಡು ಗಣೇಶ ಮೂರ್ತಿ ತಯಾರಿಸಿ ಆರಾಧಿಸಲು ಜನ ಮುಂದಾಗಬೇಕು ಎಂಬುದು ಮಂಡಳಿಯ ಉದ್ದೇಶ. ಅದಕ್ಕಾಗಿ “ಅರಶಿನ ಗಣಪ’ ಆರಾಧನೆಗೆ ಮಂಡಳಿ ಕರೆ ಕೊಟ್ಟಿದೆ.
“ಅರಶಿನ ಗಣಪ’ ಅಭಿಯಾನವನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಾಲಿನ ಪ್ಯಾಕೆಟ್, ಎಣ್ಣೆ ಪ್ಯಾಕೆಟ್‌ಗಳಲ್ಲಿ “ಅರಶಿನ ಗಣಪ’ ಅಭಿಯಾನದ ಸ್ಟಿಕರ್ ಅಂಟಿಸಿ ಮನೆಮನೆಗಳಿಗೆ ತಲುಪಿಸುವ ಪ್ರಯತ್ನಗಳಾಗುತ್ತಿವೆ. ಇದರೊಂದಿಗೆ ವಿದ್ಯುತ್ ಬಿಲ್‌ನಲ್ಲಿಯೂ ಸಂದೇಶ ಬರೆ ಯಿಸಲು ಕೋರಿಕೊಳ್ಳಲಾಗಿದೆ ಎಂದು ಪರಿಸರಾಧಿಕಾರಿಗಳು ತಿಳಿಸಿದ್ದಾರೆ. ಉತ್ತಮ ಸ್ಪಂದನೆ
ಸಾಮಾಜಿಕ ಜಾಲತಾಣಗಳ ಮುಖಾಂ ತರ ಈಗಾಗಲೇ ಮಂಡಳಿಯು ಈ ಅಭಿಯಾನಕ್ಕೆ ಜನಸಾಮಾನ್ಯರಿಂದ ಪ್ರತಿಕ್ರಿ ಯೆಗಳನ್ನು ಆಹ್ವಾನಿಸುತ್ತಿದ್ದು, ಹಲ ವರು ತಮ್ಮ ಮನೆಯಲ್ಲಿ ತಯಾರಿಸಿದ ಅರಶಿನ ಗಣಪನ ಮೂರ್ತಿಗಳ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನೆಗಳಲ್ಲಿ ತಯಾರಿಸಿದ ಮೂರ್ತಿಗಳನ್ನು ಮಂಡಳಿಯ ಫೇಸುºಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.
Related Articles
ಅರಶಿನ ಪುಡಿಗೆ ಮೈದಾ, ಅಕ್ಕಿ ಅಥವಾ ರಾಗಿಹಿಟ್ಟನ್ನು ಸಮಾನವಾಗಿ ಮಿಶ್ರಣ ಮಾಡಿಕೊಳ್ಳಬೇಕು. 7-8 ಚಮಚ ಸಕ್ಕರೆ ಸೇರಿಸಬೇಕು. ಮಿಶ್ರಣ ಹದ ಮಾಡಿಕೊಳ್ಳಲು ಬೇಕಾದಷ್ಟು ನೀರನ್ನು ಬಳಸಿಕೊಳ್ಳಬೇಕು. ಬಳಿಕ ಮೂರ್ತಿ ತಯಾರಿಸಬೇಕು. ಮೂರ್ತಿಯ ಕಣ್ಣಿನ ಭಾಗದಲ್ಲಿ ಮೆಣಸಿನ ಕಾಳುಗಳನ್ನು ಅಳವಡಿಸಿ ಕೊಳ್ಳಬಹುದು. ವಿಗ್ರಹ ತಯಾರಾದ ಬಳಿಕ ಹೂವಿನಿಂದ ಅಲಂಕಾರ ಮಾಡಿ ಕೊಳ್ಳುವುದು. ಸೆಗಣಿಯಲ್ಲಿಯೂ ಇದೇ ರೀತಿಯಾಗಿ ಮೂರ್ತಿ ಗಟ್ಟಿಯಾಗಿ ನಿಲ್ಲುವಂತೆ ತಯಾರಿಸಿಕೊಳ್ಳಬಹುದು. ಆರಾಧನೆ ಮುಗಿದ ಬಳಿಕ ಮನೆಯಲ್ಲೇ ಮೂರ್ತಿಯನ್ನು ವಿಸರ್ಜನೆ ಮಾಡಬಹುದು ಎನ್ನುತ್ತಾರೆ ಪರಿಸರಾಧಿಕಾರಿಗಳು.
Advertisement
ಮನೆಮನೆಗೆ ಮಾಹಿತಿಈ ಬಾರಿ ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ನಿರ್ಬಂಧ ಇರುವುದರಿಂದ ಜನರು ಮನೆಮನೆಗಳಲ್ಲೇ ಅರಶಿನ ಗಣಪನ ಮೂರ್ತಿ ತಯಾರಿಸಿ ಆರಾಧಿಸಬಹುದು. ಇದು ಪರಿಸರಕ್ಕೂ ಪೂರಕ, ರೋಗ ನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಈ ಅಭಿಯಾನವನ್ನು ಮನೆಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗಿದೆ.
– ಕೀರ್ತಿಕುಮಾರ್, ಪರಿಸರಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,